LATEST NEWS
ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಿದ ಜಿಲ್ಲಾಡಳಿತ
ಮಂಗಳೂರು ಅಗಸ್ಟ್ 2:ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಉಂಟಾದ ಗೊಂದಲಗಳು ಹಾಗೂ ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಏರಿಕೆ ಹಿನ್ನಲೆ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ತುಸು ಸಡಲಿಕೆ ಮಾಡಿದೆ.
ಅಂದರಂತೆ ಇದೀಗ ಮೃತದೇಹಗಳನ್ನು ಕುಟುಂಬದವರು ಅವರ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಆದರೆ ಶವವನ್ನು ಕುಟುಂಬಸ್ಥರು ಮುಟ್ಟುವುದಕ್ಕೆ ಅವಕಾಶವಿಲ್ಲ, ಬದಲಿಗೆ ಅವರ ಜಾಗದಲ್ಲಿ ಮಾತ್ರವೇ ಸುಡುವುದು, ದಫನ ಮಾಡುವುದಕ್ಕೆ ಅನುವು ಮಾಡಿಕೊಡಲಾಗುವುದು.
ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮೃತರ ಕುಟುಂಬಸ್ಥರು ಮಾಡಬೇಕಾಗುತ್ತದೆ. ಕೆಲವು ಕುಟುಂಬದವರಿಗೆ ತಮ್ಮ ಜಾಗದಲ್ಲೇ ಮೃತದೇಹದ ಅಂತಿಮ ಸಂಸ್ಕಾರ ಆಗಲಿ ಎಂಬ ಭಾವನಾತ್ಮಕ ಬೇಡಿಕೆ ಇರುತ್ತದೆ, ಅಂತಹವರಿಗೆ ಸೂಕ್ತ ಜಾಗವಿದ್ದರೆ ನಾವು ಅವಕಾಶ ಮಾಡಿಕೊಡುತ್ತೇವೆ. ಆದರೆ ಹೊರ ಜಿಲ್ಲೆಯವರಿಗೆ ಮೃತದೇಹ ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಮಂಗಳೂರು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

ADVERTISEMENT
ಇನ್ನು ಉಡುಪಿ ಜಿಲ್ಲೆಯಲ್ಲೂ ಇದೇ ರೀತಿ ಅವಕಾಶವಿದೆ. ಕುಟುಂಬಸ್ಥರು ಬಯಸಿದರೆ, ಸ್ವಂತ ಜಾಗವಿದ್ದರೆ ಮೃತದೇಹವನ್ನು ಅವರದೇ ಜಾಗದಲ್ಲಿ ದಫನ, ದಹನಕ್ಕೆ ಅವಕಾಶವಿದೆ. ಸ್ಥಳೀಯರಿಂದ ವಿರೋಧ ಇರಬಾರದು. ಕೋವಿಡ್ ಶಿಷ್ಟಾಚಾರದ ಪ್ರಕಾರವೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
Facebook Comments
You may like
-
ಶಿವಮೊಗ್ಗ ಹುಣಸೋಡು ಗ್ರಾಮದ ಬಳಿ ಕ್ರಷರ್ನಲ್ಲೂ ಸ್ಫೋಟ, 15 ಕಾರ್ಮಿಕರ ಸಾವು?
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
-
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
-
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
-
ಆರ್ಥಿಕ ಮುಗ್ಗಟ್ಟಿಗೆ ಯವ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ
You must be logged in to post a comment Login