Connect with us

DAKSHINA KANNADA

ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ: ಇಂದು ಬರೋಬ್ಬರಿ 145 ಪಾಸಿಟಿವ್ -ನೈಟ್ ಕರ್ಫ್ಯೂ ಗೆ ಸಿದ್ದತೆಯಲ್ಲಿ ಜಿಲ್ಲಾಡಳಿತ..!

ಮಂಗಳೂರು : ದೇಶದಾದ್ಯಂತ ಮಹಾಮಾರಿ ಕೊರೊನಾದ ಹಾವಳಿ ತೀವ್ರವಾಗಿದ್ದು, ಇದರ ಪರಿಣಾಮ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಕಾಣಿಸಿಕೊಂಡಿದೆ.

ಕಳೆದ ಕೆಲ ದಿನಗಳಿಂದ ನೂರರ ಗಡಿಯಲ್ಲಿದ್ದ ಕೊರೊನಾ ಪ್ರಕರಣಗಳು 2 ದಿನಗಳಿಂದ ಗಡಿ ದಾಟಿದ್ದು ಇಂದು ಬರೋಬ್ಬರಿ 145 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.

ಇದು ಜಿಲ್ಲೆಯ ಜನತೆಯನ್ನು ಆತಂಕೀಡುಮಾಡಿದೆ. ಪ್ರಸ್ತತ  ಜಿಲ್ಲೆಯಲ್ಲಿ ಕೊರೊನಾಕ್ಕೆ ಯಾರು ಬಲಿಯಾಗಿಲ್ಲ ವಾದರೂ ಇದುವರೆಗೆ ಒಟ್ಟು 743 ಮಂದಿ ಅಧಿಕೃತವಾಗಿ ಬಲಿಯಾಗಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 36,400 ಪಾಸಿಟಿವ್ ಕೇಸ್ ಗಳು ಧಾಖಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 808 ಆಕ್ವೀವ್  ಪ್ರಕರಣಗಳಿವೆ.

ಈ ಎಲ್ಲಾ ಬೆಳವಣಿಗೆಗಳಿಂದ ಜಿಲ್ಲೆಯಲ್ಲಿ ಈ ವಾರದ ಕೊನೆಯಿಂದ ನೈಟ್ ಕರ್ಫ್ಯೂ ಜಾರಿಗೊಳ್ಳುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ಒಂದು ವರ್ಷದಿಂದ ಕೊರೊನಾದ ಕಾರಣ ಲಾಕ್ ಡೌನ್- ನೈ ಟ್ ಕರ್ಫ್ಯೂಗಳಿಂದ ಬಸವಳಿದಿದ್ದ ಬಂದರು ನಗರಿ ಇಗಷ್ಟೇ ಕೊರೊನಾ ಹತೋಟಿಗೆ ಬಂದು ಚೇತರಿಕೆಯ ಹಾದಿಯಲ್ಲಿತ್ತು.

ಆದರೆ ಇದೀಗ  ಮತ್ತೆ ಮಹಾಮಾರಿ ಆವರಿಸಿದ್ದರಿಂದ ಮತ್ತೆ ನೈಟ್- ಕರ್ಫ್ಯೂ, ಲಾಕ್ ಡೌನ್ ಗಳಿಗೆ ಹೋದರೆ ಅತಿಶೋಕ್ತಿಯಾಗಲಾರದು.