Connect with us

    LATEST NEWS

    ಸತತ 5 ದಿನ ಬ್ಯಾಂಕ್ ರಜೆ – ಎಟಿಎಂ ಬರಿದಾಗುವ ಸಾಧ್ಯತೆ

    ಸತತ 5 ದಿನ ಬ್ಯಾಂಕ್ ರಜೆ – ಎಟಿಎಂ ಬರಿದಾಗುವ ಸಾಧ್ಯತೆ

    ಮಂಗಳೂರು ಮಾರ್ಚ್ 26: ಈ ವಾರದ ಕೊನೆಯಲ್ಲಿ ಸರಣಿ ರಜೆಗಳ ಹಿನ್ನಲೆಯಲ್ಲಿ ನಿಮ್ಮ ಬ್ಯಾಂಕ್ ವಹಿವಾಟುಗಳನ್ನು ಮಾರ್ಚ್ 28 ರೊಳಗೆ ಮುಗಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಎಪ್ರಿಲ್ 3 ರವರೆಗೆ ಕಾಯುವುದು ಅನಿವಾರ್ಯವಾಗಲಿದೆ. ಗುರುವಾರದಿಂದ ಎಪ್ರಿಲ್ 2 ರವರೆಗೆ ಸತತ 5 ದಿನ ಬ್ಯಾಂಕ್ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರಗಳನ್ನು ಈ ವಾರದ ಬುಧವಾರದೊಳಗೆ ಮುಗಿಸಿಕೊಳ್ಳುವುದು ಒಳಿತು. ಅಲ್ಲದೆ ಸರಣಿ ರಜೆ ಇರುವುದರಿಂದ ಎಟಿಎಂಗಳಲ್ಲೂ ಹಣ ಖಾಲಿಯಾಗುವ ಸಾಧ್ಯತೆ ಇದೆ.

    ಗುರುವಾರ ಮಹಾವೀರ ಜಯಂತಿ, ಶುಕ್ರವಾರ ಗುಡ್ ಪ್ರೈಡೆ, ಮಾರ್ಚ್ 31 ಬ್ಯಾಂಕ್ ಗಳ ವಾರ್ಷಿಕ ಲೆಕ್ಕಪತ್ರ ಮುಗಿಸುವ ದಿನ, ಭಾನುವಾರ ವಾರದ ರಜೆ. ಸೋಮವಾರ ಹೊಸ ಲೆಕ್ಕಪತ್ರಗಳನ್ನು ಆರಂಭಿಸುವ ದಿನ ಈ ಹಿನ್ನಲೆಯಲ್ಲಿ ಬ್ಯಾಂಕ್ ಗಳಲ್ಲಿ ಯಾವುದೇ ತೆರನಾದ ವ್ಯವಹಾರ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಸತತ 5 ದಿನ ಬ್ಯಾಂಕ್ ಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ.

    ಬ್ಯಾಂಕಿಂಗ್ ಸೇವೆಗಳು ಎಪ್ರಿಲ್ 3 ಮಂಗಳವಾರದಂದು ಆರಂಭವಾಗಲಿದೆ. ಅಲ್ಲದೆ ಸತತ ಐದು ದಿನ ರಜೆ, ವಾರ್ಷಿಕ ಲೆಕ್ಕಪತ್ರ ಅಂತಿಗೊಳಿಸಿ ಹೊಸ ಲೆಕ್ಕಪತ್ರ ಆರಂಭಿಸುವವರೆಗೆ ಬ್ಯಾಂಕ್ ಗಳು ಎಟಿಎಂ ಗಳಿಗೆ ಹಣ ಭರ್ತಿ ಮಾಡುವುದು ಅನುಮಾನ, ಇದರಿಂದಾಗಿ ಎಟಿಎಂಗಳಲ್ಲಿ ಹಣ ಕೊರತೆ ಉಂಟಾಗುವುದು ಬಹುತೇಕ ಖಚಿತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply