Connect with us

DAKSHINA KANNADA

ನವಮಂಗಳೂರು ಬಂದರಿನಲ್ಲಿ ಸಮುದ್ರಕ್ಕೆ ಬಿದ್ದ ಕಂಟೈನರ್ ಲಾರಿ – ಇಬ್ಬರು ನೀರುಪಾಲು

ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ಸಮುದ್ರಕ್ಕೆ ಬಿದ್ದು ಅದರಲ್ಲಿದ್ದ ಲಾರಿ ಚಾಲಕ ಸಹಿತ ಇಬ್ಬರು ಸಮುದ್ರ ಪಾಲಾದ ಘಟನೆ ನಿನ್ನೆ ರಾತ್ರಿ ನಡೆದಿದೆ.


ಚಾಲಕ ರಾಜೇಸಾಬ್ ಹಾಗೂ ಬದಲಿ ಚಾಲಕ ಮಲಕಪ್ಪ ನಾಪತ್ತೆಯಾದವರು. ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಸಮುದ್ರಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ. ದುರಂತ ನಡೆದ ವೇಳೆ ಲಾರಿ ಖಾಲಿಯಿತ್ತು, ಹಡಗಿನಿಂದ ಕಬ್ಬಿಣದ ಅದಿರು ತುಂಬಲು ಲಾರಿ ಬಂದರಿಗೆ ಬಂದಿತ್ತು. ದುರಂತದ ಬಗ್ಗೆ ಪೈಲಟ್ ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಗೆ ಮಾಹಿತಿ ನೀಡಿದ್ದಾರೆ.

 

ಸಿಐಎಸ್ಎಫ್ ಕ್ಯೂಆರ್ ಟಿ ಪಡೆಗಳ ಗಸ್ತು ತಂಡ ಟಗ್ ಬೋಟ್‌ನಲ್ಲಿ ಅಪಘಾತದ ಸ್ಥಳವನ್ನು ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಪಘಾತ ಸಂಭವಿಸಿದ ಒಂದು ಗಂಟೆಯ ನಂತರ ರಾಜೇಸಾಬ್ ಪತ್ತೆಯಾಗಿದ್ದಾನೆ. ಅವರನ್ನು ಎಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಕ್ಲೀನರ್ ಭೀಮಪ್ಪ ಇನ್ನೂ ಪತ್ತೆಯಾಗಿಲ್ಲ.  ಮಲಕಪ್ಪ ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.