Connect with us

DAKSHINA KANNADA

ಶಿರಾಡಿಕೊಡ್ಡೆಕಲ್ – ಮರಕ್ಕೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ ಚಾಲಕ ಸಾವು

ಪುತ್ತೂರು ಎಪ್ರಿಲ್ 22: ಶಿರಾಡಿ ಘಾಟ್ ನ ಶಿರಾಡಿ ಕೊಡ್ಡೆಕಲ್ ಎಂಬಲ್ಲಿ ಮರಕ್ಕೆ ಕಂಟೈನರ್ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಮುಂಜಾನೆ ಸುಮಾರ 2 ಗಂಟೆ ಸಂದರ್ಭ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ ಚಾಲಕನನ್ನು ಜಾರ್ಖಂಡ್ ಮೂಲದ ನುಸ್ರಲ್ಲಾಖಾನ್ (31) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.