ಅಮೇರಿಕಾ ಸೆಪ್ಟೆಂಬರ್ 11: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತ್ಮಮಿತ್ರ 31 ವರ್ಷದ ಚಾರ್ಲಿ ಕಿರ್ಕ್ ಅವರನ್ನು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಉತಾಹ್ ಕಾಲೇಜಿನ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.


ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಯುವ ರಿಪಬ್ಲಿಕನ್ ಮತದಾರರನ್ನು ಒಟ್ಟುಗೂಡಿಸುವಲ್ಲಿ ಪ್ರಭಾವಶಾಲಿ ಪಾತ್ರ ವಹಿಸಿದ ಕಾರ್ಯಕರ್ತ ಚಾರ್ಲಿ ಕಿರ್ಕ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡೇಟಿನ ಶಬ್ದ ಕೇಳಿ ವೇದಿಕೆಯ ಮೇಲೆ ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಸತ್ತಿದ್ದಾರೆಂದು ಘೋಷಿಸಿದರು. ಚಾರ್ಲಿ ಕಿರ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ವ್ಯಕ್ತಿಗಳಲ್ಲಿ ಒಬ್ಬರು.

ಅಮೆರಿಕಾದ ಮೌಲ್ಯಗಳಿಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದ, ವಾಕ್ ಸ್ವಾತಂತ್ರ್ಯ, ಪೌರತ್ವ, ಕಾನೂನಿನ ನಿಯಮ ಮತ್ತು ದೇಶಭಕ್ತಿಯ ಭಕ್ತಿ ಮತ್ತು ದೇವರ ಪ್ರೀತಿಯ ಮೌಲ್ಯಗಳಿಗೆ ಸಮರ್ಪಿಸಿಕೊಂಡಿದ್ದ ಚಾರ್ಲಿ ಅವರ ಹತ್ಯಾಕಾಂಡಕ್ಕೆ ಎಲ್ಲಾ ಅಮೆರಿಕನ್ನರು ಸಂತಾಪ ಸೂಚಿಸಬೇಕು, ಅವರ ನಡೆ ನುಡಿ ಕೆಲಸಗಳನ್ನು ಪಾಲಿಸಿಕೊಂಡು ಹೋಗುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಂತಾಪ ಸೂಚಕ ಸಂದೇಶದಲ್ಲಿ ಕೇಳಿಕೊಂಡಿದ್ದಾರೆ.

Share Information