ವಿಜಯಾ ಬ್ಯಾಂಕ್ ವಿಲೀನ ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ

ಮಂಗಳೂರು ಎಪ್ರಿಲ್ 1: ಇಂದಿನಿಂದ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿದ್ದು, ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಆಫೀಸ್‌ ಪಕ್ಕದಲ್ಲಿರೋ ವಿಜಯ ಬ್ಯಾಂಕ್ ಎದುರುಗಡೆ ಸೇರಿದ ಕಾಂಗ್ರೇಸ್ ಕಾರ್ಯಕರ್ತರು ಕರಾವಳಿಯ ವಿಜಯಾ ಬ್ಯಾಂಕ್ ಬ್ಯಾಂಕ್ ಅಫ್ ಬರೋಡಾದ ಜೊತೆ ವಿಲೀನ ವನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ್‌ ರೈ, ನಷ್ಟದಲ್ಲಿರೋ ದೇನಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್ ನ್ನು, ಲಾಭದಲ್ಲಿರೋ ವಿಜಯ ಬ್ಯಾಂಕ್‌ ಜೊತೆ ವಿಲೀನ ಗೊಳಿಸೋ ಪ್ರಕ್ರಿಯೆ ಸರಿಯಾದ ಕ್ರಮ ಅಲ್ಲ. ಇದಕ್ಕೆ ಭಾರತೀಯ ಜನತಾ ಪಾರ್ಟಿ ಸಾತ್‌ ನೀಡ್ತಾ ಇರೋದು ಸರಿಯಲ್ಲ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಮಾಡಿರೋ ಷಡ್ಯಂತ್ರ. ಅದೆಷ್ಟೋ ಜನರಿಗೆ ಸಹಾಯ ಮಾಡಿದಂತಹ ದೇಶದ ರಾಷ್ಟೀಕೃತ ಬ್ಯಾಂಕ್‌ ವಿಜಯಾ ಬ್ಯಾಂಕ್‌ ರಾಷ್ಟೀಕರಣಗೊಂಡ ಬಳಿಕವೂ ಸುಂದರ್‌ ರಾಮ್‌ ಶೆಟ್ಟಿಯವರ ಭಾವಚಿತ್ರವನ್ನು ಇಲ್ಲಿ ಹಾಕಲಾಗಿತ್ತು. ಆದ್ರೆ, ಇಂದು ಅವರ ಪೋಟೋವನ್ನು ಮೂಲೆಗೆ ಹಾಕೋ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ಕುಮಾರ್ ಸಂಸದ ನಳಿನ್ ಕುಮಾರ್ ಕಟೀಲ್ ವಿಜಯಾ ಬ್ಯಾಂಕ್ ವಿಲೀನದ ಸಂದರ್ಭ ಯಾವುದೇ ಚಕಾರ ಎತ್ತದ ನಳಿನ್‌ ಕುಮಾರ್‌ ಕಟೀಲ್‌ ಅವರು, ದ.ಕ. ಜಿಲ್ಲೆಯ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಇಂದು ನಾವು ಆರಂಭ ಮಾಡಿರೋ ಹೋರಾಟ ಮತ್ತೊಮ್ಮೆ ಈ ನೆಲದಲ್ಲಿ ವಿಜಯಾ ಬ್ಯಾಂಕನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಪಾರದರ್ಶಕವಾಗಿ ಹೊರಾಟ ಮಾಡುತ್ತೇವೆ ಎಂದು ಹೇಳಿದರು.