Connect with us

LATEST NEWS

ರಾಜ್ಯ ಸರಕಾರದ ವಿರುದ್ದ ಉಡುಪಿಯಲ್ಲಿ ಕಾಂಗ್ರೇಸ್ ಪ್ರತಿಭಟನೆ

ಉಡುಪಿ ಅಗಸ್ಟ್ 20: ರಾಜ್ಯ ಸರಕಾರ ಕೊರೊನಾ ಭೃಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.ಈ ಸಂದರ್ಭ ರಾಜ್ಯ ಸರಕಾರದ ವಿರುದ್ದ‌ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.


ಉಡುಪಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕೊರೊನಾ ತಡೆಗೆ ಅವಶ್ಯವಾದ ಸಾಮಗ್ರಿ ಖರೀದಿಸುವಲ್ಲಿ ರಾಜ್ಯ ಸರಕಾರ ಭೃಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು. ಈ ಕೂಡಲೇ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯಪಾಲರಿಗೆ ತಹಶಿಲ್ದಾರರ ಮೂಲಕ ಈ ಸಂದರ್ಭ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಯು. ಅರ್. ಸಬಾಪತಿ ಭಾಗಿಯಾಗಿದ್ದರು.

Facebook Comments

comments