Connect with us

KARNATAKA

ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ – ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೇಸ್ ವ್ಯಂಗ್ಯ

ಬೆಂಗಳೂರು: ಮೈಸೂರು ಕಾಲೇಜು ವಿಧ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದ ಕುರಿತು ಹೇಳಿಕೆ ನೀಡುವಲ್ಲಿ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಹಿಂದೆ ಮುಂದೆ ನೋಡುತ್ತಿದ್ದು, ಇದೀಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಈಗ ಹೋರಾಟಗಾರ್ತಿಯಂತೆ ಮಾತನಾಡಲಾಗದು ಎಂಬ ಹೇಳಿಕೆಗೆ ಕಾಂಗ್ರೇಸ್ ವ್ಯಂಗ್ಯವಾಡಿದ್ದು, ಈಗ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ ಎಂದು ಟ್ವೀಟ್ ಮಾಡಿದೆ.


ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೇಸ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಎಲ್ಲಿಯೇ ಕೊಲೆ, ಸುಲಿಗೆ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರ್ಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ, ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!’ ಎಂದು ಕಾಂಗ್ರೆಸ್‌ನ ಕರ್ನಾಟಕ ಘಟಕದ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್ ಮಾಡಲಾಗಿದೆ.


ಪತ್ರಕರ್ತರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮೈಸೂರಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ. ಈ ಕಾರಣದಿಂದ ಹೋರಾಟಗಾರ್ತಿಯಂತೆ ಮಾತನಾಡಲು ಆಗದು ಎಂದು ಹೇಳಿದ್ದರು.