ಮಂಗಳೂರು ಸೆಪ್ಟೆಂಬರ್ 09: ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಹೊಂಡಕ್ಕೆ ಬಿದ್ದು ಅಪಘಾತದಲ್ಲಿ ಸಾವನಪ್ಪಿದ ಎ.ಜೆ. ಆಸ್ಪತ್ರೆ ಸಿಬ್ಬಂದಿ ಮಾಧವಿ ಅವರ ಕುಟುಂಬ ಸದಸ್ಯರನ್ನು ಕಾಂಗ್ರೇಸ್ ಮುಖಂಡ ಪದ್ಮರಾಜ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ಕುರಿತಂತೆ ಪೋಸ್ಟ್ ಮಾಡಿರುವ ಅವರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಇನ್ನಿತರ ರಸ್ತೆಗಳ ದುರವಸ್ಥೆಯಿಂದ ಅನೇಕ ಜೀವ ಬಲಿಯಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮೂಕರಾಗಿರುವುದು ವಿಷಾದನೀಯ.


ಮನೆಯಿಂದ ಕೆಲಸಕ್ಕಾಗಿ ಹೊರಟವರು ರಸ್ತೆಯ ಅವ್ಯವಸ್ಥೆಯಿಂದ ಶವವಾಗುತ್ತಿರುವುದು ಖೇದಕರ ಸಂಗತಿ. ಬಹಳಷ್ಟು ದಿನಗಳಿಂದ ರಸ್ತೆಗೆ ಸಂಬಂಧ ಪಟ್ಟ ಅಧಿಕಾರಿಗಳು ನೋಡುತ್ತಲೇ ಇದ್ದಾರೆ ಹೊರತು ಮನುಷ್ಯನ ಜೀವ ರಕ್ಷಣೆಯ ಬಗ್ಗೆ ಕ್ರಮ ಕೈಗೆತ್ತಿಕೊಳ್ಳುವುದಿಲ್ಲಯಾಕೆ?

ರಸ್ತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೇವಲ ಸಂಬಳವನ್ನು ಪಡೆಯುವುದಕ್ಕಾಗಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೆ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.. ರಸ್ತೆ ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಚಿಂತಾಜನಕ ಸ್ಥಿಯಲ್ಲಿರುವ ಹಾಗೂ ಮರಣವನ್ನಪ್ಪಿದ ಅದೆಷ್ಟೋ ಜೀವವನ್ನು ಬಲಿತೆಗೆದು ಕೊಂಡ ಘಟನೆಗಳಿಗೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧ ಪಟ್ಟ ಮುಖ್ಯ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ.

ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ನೇರವಾಗಿ ಮನೆಗೆ ಹೋಗಲಿ. ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಗಮನಹರಿಸಿ ಇನ್ನಾದರೂ ಮನುಷ್ಯನ ಜೀವಗಳು ಅಪಾಯಕ್ಕೆ ಸಿಲುಕದ ರೀತಿ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರಲ್ಲಿ ಆಗ್ರಹಿಸುತ್ತೇನೆ. ಕೂಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಸಮರ್ಧನೀಯ,ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಇಲಾಖೆಯೇ ನೇರ ಜವಾಬ್ದಾರಿ ವಹಿಸಿ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

https://youtu.be/9B5AnRJ2ytw

Share Information