ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆ ಸ್ವಪಕ್ಷಿಯರೇ ವಿರೋಧಿಗಳಾದರೇ ?

ಮಂಗಳೂರು, ಮಾರ್ಚ್ 24 : ಲೋಕ ಸಭಾ ಚುನಾವಣೆಯ ಅಭ್ಯರ್ಥಿಯ ಘೋಷಣೆ ಆಗುತ್ತಿದ್ದಂತೆ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದ ಕಾಂಗ್ರೆಸ್ ಪಾಳಾಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕರ ಶೀತಲ ಸಮರ ಬಹಿರಂಗವಾಗಿ ಬೀದಿಗೆ ಬಂದಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಆಯ್ಕೆಯಾಗಿ ಪ್ರಚಾರ ಕಣಕ್ಕೆ ಧುಮುಕುತ್ತಿರುವಾಗಲೇ ಕಾಂಗ್ರೆಸ್ಸಿನ ಮತ್ತೊಂದು ಗುಂಪು ಕಾಲೇಳೆಯಲು ಆರಂಭದಲ್ಲೇ ಶುರುಮಾಡಿಬಿಟ್ಟಿದೆ.

ಕಾಂಗ್ರೆಸ್ ನ ಕಾರ್ಮಿಕ ಸಂಘಟನೆಯಾದ ಇಂಟಕ್‌ ನ ಮಂಗಳೂರು ಅಧ್ಯಕ್ಷ ಪುನೀತ್ ಶೆಟ್ಟಿ ಮಿಥುನ್ ರೈ ಬಗ್ಗೆ ಬಹಿರಂಗವಾಗಿಯೇ ಆಯ್ಕೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಸ್ವತಾ ವಿಡಿಯೋ ರೆಕಾರ್ಡ್ ಮಾಡಿ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ.

ಆ ವಿಡಿಯೋದಲ್ಲಿ ಮಿಥುನ್ ರೈ ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ ಹಾಗೂ ಮಿಥುನ್ ಗೆ ಸೀಟು ನೀಡಿದ ಕಾಂಗ್ರೆಸ್ ಹಿರಿಯ ನಾಯಕನ್ನು ತರಾಟೆಗೆ ತಗೊಡಿದ್ದಾರೆ

ವಿಡಿಯೋಗಾಗಿ…

4 Shares

Facebook Comments

comments