Connect with us

LATEST NEWS

ಎನ್ ಆರ್ ಸಿ ಪರ ಕಾಂಗ್ರೇಸ್ ಮುಖಂಡ ಯು.ಟಿ ಖಾದರ್ ಬ್ಯಾಟಿಂಗ್

ಎನ್ ಆರ್ ಸಿ ಪರ ಕಾಂಗ್ರೇಸ್ ಮುಖಂಡ ಯು.ಟಿ ಖಾದರ್ ಬ್ಯಾಟಿಂಗ್

ಮಂಗಳೂರು ಅಕ್ಟೋಬರ್ 9: ಕೇಂದ್ರ ಸರಕಾರ ಜಾರಿಗೆ ತಂದ ರಾಷ್ಟ್ರೀಯ ಪೌರತ್ವ ನೊಂದಣಿ‌ ಕಾಯ್ದೆ ಪರ ಮಾಜಿ ಸಚಿವ ಯು.ಟಿ.ಖಾದರ್ ಬ್ಯಾಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಎನ್.ಆರ್.ಸಿ ಕಾಯ್ದೆ ಈ ಹಿಂದೆಯೂ ದೇಶದಲ್ಲಿ ಜಾರಿಯಲ್ಲಿದೆ. ಆದರೆ ಇದೀಗ ಕಾಯ್ದೆಯಲ್ಲಿ ಕೊಂಚ ಮಾರ್ಪಾಡು ಮಾಡಲಾಗಿದೆ.

ವಿದೇಶಗಳಲ್ಲಿ ಯಾವ ರೀತಿ ಇತರ ದೇಶದ ಪ್ರಜೆಯ ಮೇಲೆ ಕಾನೂನು ಜಾರಿಯಾಗುತ್ತೋ ಅಂಥಹುದೇ ಕಾನೂನು ಭಾರತದಲ್ಲೂ ಜಾರಿಯಾಗುವುದರಲ್ಲಿ ಯಾವುದೇ ಆಕ್ಷೇಪದ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡ ಅವರು ಈ ವಿಚಾರದಲ್ಲಿ ಗೊಂದಲದ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದರು. ಸ್ವತಹ ಕೇಂದ್ರ ಗೃಹಸಚಿವರೇ ಒಂದು ವರ್ಗವನ್ನು ಉದ್ಧೇಶಿಸಿ ಗೊಂದಲ ಸೃಷ್ಟಿಸುವ ಹೇಳಿಕೆಯನ್ನು ನೀಡುತ್ತಿರುವುದು ಸರಿಯಲ್ಲ ಎಂದರು.‌

ರಾಜ್ಯ ಸರಕಾರ ಕಾಟಾಚಾರಕ್ಕಾಗಿ ಅಧಿವೇಶನವನ್ನು ಕರೆದಿದ್ದು, ಕೇವಲ ಮೂರು ದಿನಗಳಿಗೆ ಅಧಿವೇಶನವನ್ನು ಸೀಮಿತಗೊಳಿಸಿದೆ. ಈ ಅವಧಿಯಲ್ಲಿ ರಾಜ್ಯದ ಸಮಗ್ರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಿಲ್ಲ. ಪ್ರಶ್ನೋತ್ತರಕ್ಕೂ ಈ ಬಾರಿ ಅವಕಾಶ ನೀಡದಿರುವುದು ರಾಜ್ಯದ ಜನತೆಗೆ ಮಾಡಿದ ಅನ್ಯಾಯ ಎಂದರು. ಕೂಡಲೇ ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ದಕ್ಷಿಣಕನ್ನಡ ಜಿಲ್ಲೆಯ ಬಂದರು ಹಾಗೂ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಅವರು ಈ ಹಿಂದೆ ಇದ್ದ ಕಾರ್ಮಿಕರನ್ನು ನಿಯೋಜಿಸಬೇಕು. ಉದ್ಯೋಗದಲ್ಲಿ ಶೇಕಡಾ 50 ಭಾಗವನ್ನು ಜಿಲ್ಲೆಗೆ ಮೀಸಲಿಡಬೇಕೆಂದು ಅವರು ಒತ್ತಾಯಿಸಿದರು.

Facebook Comments

comments