ಕಾಂಗ್ರೇಸ್ ಪಕ್ಷ ಜಿಲ್ಲೆಯಲ್ಲಿ ರೌಡಿಯೊಬ್ಬನನ್ನು ಅಭ್ಯರ್ಥಿಯಾಗಿ ನಿಲ್ಲಿಸಿದೆ – ಎಸ್ ಡಿಪಿಐ

ಪುತ್ತೂರು ಎಪ್ರಿಲ್ 9: ಕಾಂಗ್ರೇಸ್ ನಕಲಿ ಜಾತ್ಯಾತೀತ ಪಕ್ಷವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೇಸ್ ಎರಡೂ ಪಕ್ಷಗಳೂ ಒಂದೇ ಎಂದು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣಕನ್ನಡ ಲೋಕಸಭಾ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದರು.
ಪುತ್ತೂರಿನಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ನಕಲಿ ಜಾತ್ಯಾತೀತದ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದ್ದರೆ.

ಬಿಜೆಪಿ ಹಿಂದುತ್ವದ ಮೂಲಕ ಕೋಮುವಾದವನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ ಅವರು ಕಾಂಗ್ರೇಸ್ ಪಕ್ಷ ಜಿಲ್ಲೆಯಲ್ಲಿ ರೌಡಿಯೊಬ್ಬನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಕೇಸರಿ ಶಾಲು ಹಾಗೂ ಗೋ ಪೂಜೆ ಮಾಡುವ ಮೂಲಕ ಒಂದು ವರ್ಗವನ್ನು ಓಲೈಸುವ ಯತ್ನದಲ್ಲಿ ನಿರತವಾಗಿದೆ ಎಂದರು.

ಎಸ್.ಡಿ.ಪಿ.ಐ ಪಕ್ಷಕ್ಕೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಿದ್ದು, ಈ ಬಾರಿ ಗೆಲವು ತಮ್ಮದೇ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

VIDEO