ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳು ಕ್ರಿಮಿನಲ್ ಗಳ ಜೊತೆ ಶೇರಿಂಗ್

ಮಂಗಳೂರು ಡಿಸೆಂಬರ್ 04: ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಸಿಬ್ಬಂದಿಯೊಬ್ಬ ಇಲಾಖೆಯ ಗೌಪ್ಯ ಮಾಹಿತಿಯನ್ನು ನಟೋರಿಯಸ್ ಕ್ರಿಮಿನಲ್ ಗೆ ನೀಡುತ್ತಿರುವ ವಿಚಾರ ಬಹಿರಂಗಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತಂತೆ ಪೊಲೀಸ್ ಸಿಬ್ಬಂದಿ ಹಾಗೂ ಕ್ರಿಮಿನಲ್ ನಡುವೆ ನಡೆದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಟೋರಿಯಸ್ ಕ್ರಿಮಿನಲ್ ಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಮಂಗಳೂರು ಸಿಸಿಬಿ ಪೊಲೀಸ್ ಪಿ.ಸಿ. ಚಂದ್ರ ಎಂದು ತಿಳಿದು ಬಂದಿದ್ದು, ಈತ ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳನ್ನು ನೀಡುತ್ತಿದ್ದ ಎಂಬುವುದು ಇದೀಗ ಬಹಿರಂಗವಾಗುತ್ತಿದೆ.

ಚಂದ್ರ ಕೇರಳದ ನಟೋರಿಯಸ್ ತಲಕಿ ರಫೀಕ್ ಜೊತೆ ಪೊಲೀಸ್ ಇಲಾಖೆ ಗೌಪ್ಯ ಮಾಹಿತಿಗಳನ್ನು ಈತ ಶೇರ್ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಸುಮಾರು 19 ಪ್ರಕರಣದ ಪ್ರಮುಖ ಆರೋಪಿ ಕೇರಳದ ಮಂಜೇಶ್ವರ ನಿವಾಸಿ ನಟೋರಿಯಸ್ ತಲಕಿ ರಫೀಕ್ ಗೆ ಸಿಸಿಬಿ ಪೊಲೀಸ್ ಚಂದ್ರ ಇಲಾಖೆಯ ಗೌಪ್ಯ ಮಾಹಿತಿ ನೀಡುತ್ತಿದ್ದ. ಪ್ರತಿ ಮಾಹಿತಿ ಗೆ ಇಂತಿಷ್ಟು ಅಮೌಂಟ್ ಎಂದು ಮೊದಲೇ ಡೀಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಕುರಿತ ಆಡಿಯೋ ಕ್ಲಿಪ್ ಈಗ ಬಹಿರಂಗ ವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಕ್ಲಿಪ್ ಬಹಿರಂಗ ವಾಗುತ್ತಿದ್ದಂತೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ನಾನಾ ಕಡೆ ದುಷ್ಕೃತ್ಯ ಎಸಗಿದ್ದ ತಲಾಕಿ ರಫೀಕ್ ಜತೆ ನಂಟು ಇರಿಸಿಕೊಂಡಿದ್ದ ಸಿಸಿಬಿ ಕಾನ್ಸ್ಟೇಬಲ್ ಚಂದ್ರ, ಆತನಿಗೆ ಬೇಕಾದವರ ಅಥವಾ ವಿರೋಧಿ ಗ್ಯಾಂಗ್ ನ ಸದಸ್ಯರ ಮೊಬೈಲ್ ಲೊಕೇಶನ್ ಮಾಹಿತಿ, ವ್ಯಕ್ತಿಗಳ ಹಿನ್ನೆಲೆ ಸೇರಿದಂತೆ ಪೊಲೀಸ್ ಇಲಾಖೆಗಳ ಕೆಲವೊಂದು ಗೌಪ್ಯ ವಿಚಾರಗಳನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ.

ಬಹಿರಂಗ ಗೊಂಡಿರುವ ಆಡಿಯೋ ಕ್ಲಿಪ್ ಮಲಯಾಳಂ ಭಾಷೆಯಲ್ಲಿದ್ದು ಮೊಬೈಲ್ ಸಿಡಿಆರ್ ರಿಪೋರ್ಟ್ ನೀಡುವ ಬಗ್ಗೆ ಡೀಲ್ ಮಾತುಕತೆ ಇದೆ.  ಚಂದ್ರ ನೀಡುತ್ತಿದ್ದ ಮಾಹಿತಿಯನ್ನು ತಲಕಿ ರಫೀಕ್ ದುಷ್ಕೃತ್ಯ ಎಸಗಲು ಬಳಸುತ್ತಿದ್ದ ಎಂದು ಹೇಳಲಾಗಿದೆ.

AUDIO

3 Shares

Facebook Comments

comments