Connect with us

LATEST NEWS

ತುಳುವಿನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟ್ವೀಟ್

ತುಳುವಿನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟ್ವೀಟ್

ಮಂಗಳೂರು ಸೆಪ್ಟೆಂಬರ್ 12: ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸುವಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಡಾ. ಹರ್ಷ ಅವರು ಯಾವಾಗಲೂ ಮುಂದು,ಮೈ ಬೀಟ್ ಮೈ ಪ್ರೈಡ್’ ನಿಂದಾಗಿ ಪೊಲಿಸ್ ಕಮೀಷನರ್ ಡಾ. ಹರ್ಷ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ . ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತುಳುವಿನಲ್ಲೆ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಾಳೆ ಮಂಗಳೂರಿನ ಪೊಲೀಸ್ ಮೈದಾನದಲ್ಲಿ ನಡೆಯಲಿರುವ ಸೇವಾ ಕವಾಯತು ಕುರಿತಾದ ಮಾಹಿತಿಯನ್ನು ತುಳುವಿನಲ್ಲೇ ಹಂಚಿಕೊಂಡಿದ್ದಾರೆ. ಮೊದಲು ಇಂಗ್ಲೀಷ್, ನಂತರ ಕನ್ನಡ ಬಳಿಕ ತುಳುವಿನಲ್ಲಿ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಆಯುಕ್ತರು ತುಳುವಿನಲ್ಲಿ ಮಾಡಿ ಟ್ವೀಟ್ ಹೀಗಿದೆ. ” ಕುಡ್ಲದ ಪೊಲೀಸ್ ಮೈದಾನಡ್ ಎಲ್ಲೆಕಾಂಡೆ 8-9ಗಂಟೆ ಮುಟ ಪೊಲೀಸ್ ಸೇವಾ ಕವಾಯತು ನಡೆಯರುಂಡು.ಯಾನ್ ಅಧಿಕಾರಗ್ ಬತ್ತಿಬೊಕ್ಕ ದುಎನ್ನ ಸುರತಾ ಕಾರ್ಯಕ್ರಮ.ಜೆಲ್ಲೆದ ಪೂರ ಪೊಲೀಸ್ ಅಧಿಕಾರಿ,ಸಿಬ್ಬಂದಿಲೆಡ ಪಾತೆರೆ ಬಾರಿ ಉಮೆದುಡುಲ್ಲೆ.ಅಂಚೆನೆ ಈ ಕಾರ್ಯಕ್ರಮ ಇಲಾಖೆದ ಫೇಸ್ಬುಕ್,ಟ್ವಿಟ್ಟರ್ಡ್ ಪ್ರಸಾರ ಅಪುನೆಟತ್ರ ಜನಕುಲು ಇಲ್ಲಡೆ‌ ಕುಲೊಂದು ತುವೋಲಿ ”

ಪೊಲೀಸ್ ಆಯುಕ್ತರ ಈ ಟ್ವೀಟ್ ಈಗ ಬಾರಿ ವೈರಲ್ ಆಗಿದ್ದು , ಡಾ. ಹರ್ಷ ಅವರ ಈ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಜನ ಕಮೆಂಟ್ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದ್ದಾರೆ.

ಯುವಜನತೆಯನ್ನು ಮುಟ್ಟಲು ಸಾಮಾಜಿಕ ಜಾಲತಾಣ ಒಂದು ಪ್ರಮುಖ ಸಾಧನ ಎಂದುಕೊಂಡಿರುವ ಪೊಲೀಸ್ ಆಯುಕ್ತ ಡಾ. ಹರ್ಷ ಅವರು ಪ್ರತಿದಿನ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಪೊಲೀಸ್ ಇಲಾಖೆಯ ಸಾಧನೆ ಹಾಗೂ ಸಾರ್ವಜನಿಕರಿಗೆ ಕಾನೂನುಗಳ ಬಗ್ಗೆ ಸದಾ ಮಾಹಿತಿ ನೀಡುತ್ತಾ ಇದ್ದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

 

Facebook Comments

comments