Connect with us

DAKSHINA KANNADA

ಕಾಂಗ್ರೇಸ್ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜೈಕಾರ ಪ್ರಕರಣ, ದಿ ಮ್ಯಾಂಗಲೂರು ಮಿರರ್ ವಿರುದ್ಧ ದೂರು

ಕಾಂಗ್ರೇಸ್ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜೈಕಾರ ಪ್ರಕರಣ, ದಿ ಮ್ಯಾಂಗಲೂರು ಮಿರರ್ ವಿರುದ್ಧ ದೂರು

ಮಂಗಳೂರು, ಮೇ 21: ಮೇ 19 ರ ಶನಿವಾರ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಪಕ್ಷದ ವತಿಯಿಂದ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವರದಿ ಪ್ರಕಟಿಸಿದ ದಿ ಮ್ಯಾಂಗಲೂರು ಮಿರರ್ ವಿರುದ್ಧ ಸಂಭ್ರಮಾಚರಣೆಯನ್ನು ಫೇಸ್ಬುಕ್ ಲೈವ್ ಮಾಡಿದ ಕಾಂಗ್ರೇಸ್ ಕಾರ್ಯಕರ್ತ ಸಮರ್ಥ್ ಭಟ್ ಮಂಗಳೂರು ಪೋಲೀಸರಿಗೆ ದೂರು ನೀಡಿರುವ ವಿಚಾರ ತಿಳಿದುಬಂದಿದೆ.

ದೂರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಮುಖಂಡರು ರಾಜ್ಯದಲ್ಲಿ ಕಾಂಗ್ರೇಸ್ -ಜೆಡಿಎಸ್ ಸರಕಾರ ರಚಿಸುವ ಹಿನ್ನಲೆಯಲ್ಲಿ ಸಂಭ್ರಮಾಚರಣೆಯನ್ನು ನಡೆಸಿದ್ದರು.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೇಸ್ ಕಛೇರಿ ಮುಂಭಾಗದಲ್ಲಿ ಕಾಂಗ್ರೇಸ್ ಮುಖಂಡ ಜೆ.ಆರ್.ಲೋಬೋ ನೇತೃತ್ವದಲ್ಲಿ ಈ ವಿಜಯೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಿಗೆ ಹಾಗೂ ಕಾಂಗ್ರೇಸ್ ಪಾರ್ಟಿ ಗೆ ಜೈ ಕಾರ ಹಾಕಲಾಗಿತ್ತು.

ಪಕ್ಷಕ್ಕೆ ಜೈಕಾರ ಹಾಕಿದ ವಿಡಿಯೋ ತುಣುಕನ್ನು ತಿರುಚಿ ಕಾಂಗ್ರೇಸ್ ಪಾರ್ಟಿ ಕಿ ಜೈ ಎಂದು ಹೇಳುವ ಸ್ಥಳದಲ್ಲಿ ಪಾಕಿಸ್ತಾನಕ್ಕೆ ಜೈ ಎಂಬುದಾಗಿ ಸುಳ್ಳಾಗಿ ತಿರುಚಿ ಅಪಪ್ರಚಾರವನ್ನು ಮಂಗಳೂರಿನ ರೂಪೇಶ್ ಶೇಟ್ ಎಂಬವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುತ್ತಾರೆ ಎಂದು ದೂರಿನಲ್ಲಿ ಸಮರ್ಥ್ ಭಟ್ ಉಲ್ಲೇಖಿಸಿದ್ದಾರೆ.

ಅಲ್ಲದೆ ದಿ ಮ್ಯಾಂಗಲೂರು ಮಿರರ್ ತನ್ನ ವೆಬ್ ಸೈಟ್ ನಲ್ಲಿ ಕೂಡಾ ತಿರುಚಿದ ವಿಡಿಯೋವನ್ನು ಅಪ್ ಲೋಡ್ ಮಾಡಿ ಕೋಮು ಭಾವನೆ ಕೆರಳುವಂತಹ ಬರಹಗಳನ್ನು ಬರೆಯಲಾಗಿದೆ ಎಂದು ಆರೋಪಿಸಿರುವ ಸಮರ್ಥ್ ಭಟ್ ಈ ಕುರಿತು ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಪೋಲೀಸ್ ಅಧೀಕ್ಷಕರು ಮಂಗಳೂರು ನಗರ ಕ್ಕೆ ದೂರು ಸಲ್ಲಿಸಿದ್ದಾರೆ.

ಸಮರ್ಥ್ ಭಟ್ ಅವರಿಗೆ ದಿ ಮ್ಯಾಂಗಲೂರು ಮಿರರ್ ಕೇಳುವ ಹಾಗೂ ಹೇಳುವ ಸ್ಪಷನೆ

1. ಕಾಂಗ್ರೇಸ್ ಕಾರ್ಯಕರ್ತರು ಜೈಕಾರ ಹಾಕುವ ವಿಡಿಯೋ ಚಿತ್ರಣವನ್ನು ಫೇಸ್ಬುಕ್ ಮೂಲಕ ಲೈವ್ ಕೊಟ್ಟವರು ನೀವು ತಾನೆ ?. ಹಾಗಿದ್ದ ಪಕ್ಷದಲ್ಲಿ ಅದನ್ನು ತಿರುಚುವ ಪ್ರಶ್ನೆ ಎಲ್ಲಿ ಉದ್ಬವವಾಗುತ್ತದೆ ?

2. ನೀವು ಫೇಸ್ಬುಕ್ ನಲ್ಲಿ ಲೈವ್ ನೀಡಿದ ವಿಡಿಯೋ ದಿ ಮ್ಯಾಂಗಲೂರು ಮಿರರ್ ನಲ್ಲಿ ಪ್ರಕಟವಾದ ತಕ್ಷಣ ನಿಮ್ಮ ಪೇಜ್ ನಿಂದ ಲೈವ್ ವಿಡಿಯೋವನ್ನು ಯಾವ ಕಾರಣಕ್ಕೆ ಡಿಲೀಟ್ ಮಾಡಿದಿರಿ ?

3. ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ವಿಚಾರ ಕೋಮು ಭಾವನೆ ಕೆರಳಿಸಲಿದೆ ಎಂದು ನೀವು ಯಾವ ಆಧಾರದಲ್ಲಿ ಹೇಳಿದ್ದೀರಿ ?

ಭಾರತದ ನೆಲದಲ್ಲಿ ನಿಂತು ಪಾಕಿಸ್ತಾನಕ್ಕೆ ಜೈಕಾರ ಹಾಕುವುದು ಭಾರತ ವಿರೋಧಿ ಚಟುವಟಿಕೆಯಾಗುತ್ತದೆ ಹೊರತು, ಅದು ಯಾವತ್ತೂ ಕೋಮು ಭಾವನೆ ಕೆರಳಿಸುವ ವಿಚಾರ ಹೇಗಾಗುತ್ತದೆ ಎನ್ನುವುದಕ್ಕೆ ಸ್ಪಷ್ಟನೆ ನೀಡಿ.

4. ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀವು ಭಾಗಿಯಾಗಿದ್ದಲ್ಲಿ , ನಿಮ್ಮ ಮೊಬೈಲ್ ಮೂಲಕ ಫೇಸ್ಬುಕ್ ಲೈವ್ ಮಾಡಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿ.

5. ವಿಡಿಯೋಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ತಮ್ಮ ಸ್ಪಷ್ಟನೆಯೇನು ?

Share Information
Continue Reading
Advertisement
Click to comment

Leave a Reply

Your email address will not be published. Required fields are marked *