Connect with us

LATEST NEWS

ನಿಖಿಲ್ ಎಲ್ಲಿದ್ದೀಯಪ್ಪ ಸಂಭಾಷಣೆ ಹಾಸ್ಯಕ್ಕೆ ಬಳಸಿದ್ದ ಯಕ್ಷಗಾನ ಕಲಾವಿದನ ವಿರುದ್ಧ ದೂರು ದಾಖಲು

ನಿಖಿಲ್ ಎಲ್ಲಿದ್ದೀಯಪ್ಪ ಸಂಭಾಷಣೆ ಹಾಸ್ಯಕ್ಕೆ ಬಳಸಿದ್ದ ಯಕ್ಷಗಾನ ಕಲಾವಿದನ ವಿರುದ್ಧ ದೂರು ದಾಖಲು

ಉಡುಪಿ ಮಾರ್ಚ್.17: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಭಾಷಣೆಯನ್ನು ಯಕ್ಷಗಾನದಲ್ಲಿ ಬಳಸಿದ್ದಕ್ಕೆ ಹಾಸ್ಯ ಕಲಾವಿದನ ವಿರುದ್ದ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರು ಮತ್ತು ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ಠಾಣೆಯಲ್ಲಿ ಕಲೆಗೆ ಮತ್ತು ಕಲಾವಿದರನ್ನು ಮತ್ತು ಯಕ್ಷ ಪ್ರಿಯರನ್ನು ಅವಮಾನಿಸಿ ಮತ್ತು ಅಸಂಬದ್ಧ ಮಾತನ್ನು ಆಡಿದ್ದಾರೆ ಎಂಬ ಆರೋಪದಡಿ ಹಾಸ್ಯ ಕಲಾವಿದನ ಮೆಲೆ ದೂರು ದಾಖಲಿಸಿದ್ದಾರೆ.

ಕರಾವಳಿಗರು ಯಕ್ಷಗಾನವನ್ನು ಬೆಳಕಿನ ಸೇವೆ ಎಂಬ ಆಧಾರದಲ್ಲಿ ದೇವರ ಸನ್ನಿಧಾನಕ್ಕೆ ಹರಕೆಯಾಗಿ ಮತ್ತು ಕರಾವಳಿಯ ಸಂಸ್ಕೃತಿ ಕಲೆಯಾಗಿ ಆರಾಧಿಸುತ್ತಾ ಬಂದಿದ್ದು ಇದರಲ್ಲಿ ಸಹಸ್ರಾರು ಕಲಾವಿದರ ಯಕ್ಷ ಕಲಾಭಿಮಾನಿಗಳ ಪ್ರೋತ್ಸಾಹಕರ ಭಕ್ತಾಭಿಮಾನಿಗಳ ಶ್ರಮ ಅಡಗಿದೆ . ಇತ್ತೀಚಿನ ದಿನಗಳಲ್ಲಿ ಕೆಲವು ತಿಳಿವಳಿಕೆ ಇಲ್ಲದ ಒಬ್ಬರು ಇಬ್ಬರು ಯಾರನ್ನೂ ಮೆಚ್ಚಿಸುವ ಉದ್ದೇಶವೋ ಅಥವಾ ವಿಪರೀತ ಹಾಸ್ಯದ ಅಮಲು ತಿಳಿಯದೆ ಟ್ರೋಲ್ ವಿಷಯಗಳನ್ನು ಕರಾವಳಿಯ ಯಕ್ಷಗಾನಗಳಲ್ಲಿ ಬಳಸುತ್ತಿರುವುದು ದುಃಖದ ಕ್ಷಣವಾಗಿದೆ.

ಈಗ ಕೂಡ ಅಂತಹುದೇ ಒಂದು ಪ್ರಸಂಗ ಎದುರಾಗಿದ್ದು ಇದು ಮುಂದುವರಿದರೆ ಯಕ್ಷಗಾನ ಮತ್ತು ಯಕ್ಷಗಾನ ಪ್ರಿಯರು ಹಾಗೂ ಕಲಾವಿದರಿಗೆ ಕೆಟ್ಟ ಹೆಸರು ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದು ರಾಜಕೀಯ ಉದ್ದೇಶಕ್ಕಾಗಿಯ? ಎಂಬ ಪ್ರಶ್ನೆಗೆ ಉತ್ತರಿಸಿದ ರವಿ ಶೆಟ್ಟಿ ಇದು ಯಾವುದೇ ರಾಜಕೀಯ ಸಂಬಂಧಪಟ್ಟದ್ದಲ್ಲ ಆದ್ದರಿಂದಲೇ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ದೂರು ನೀಡಿದ್ದೇನೆ ರಾಜಕೀಯದಲ್ಲಿ ಬರುವ ಕೊಳಕು ವಿಷಯಗಳನ್ನು ದೇವರ ಸೇವೆಯ ಆಟದಲ್ಲಿ ಬಳಸುವುದು ಎಷ್ಟು ಸರಿ? ಆದ್ದರಿಂದ ಪಕ್ಷಾತೀತವಾಗಿ ಒಂದು ಸಂಘಟನೆಯ ಮುಖಂಡನಾಗಿ ಮತ್ತು ಯಕ್ಷ ಅಭಿಮಾನಿಯಾಗಿ ಈ ದೂರನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Facebook Comments

comments