Connect with us

    LATEST NEWS

    ಮಂಗಳಮುಖಿಯೊಬ್ಬರು ಆರ್ ಜೆ ಆಗಿ ಕರಾವಳಿಯ ಜನರ ಮುಂದೆ

    ಮಂಗಳಮುಖಿಯೊಬ್ಬರು ಆರ್ ಜೆ ಆಗಿ ಕರಾವಳಿಯ ಜನರ ಮುಂದೆ

    ಮಂಗಳೂರು ನವೆಂಬರ್ 11: ನವೆಂಬರ್ 21 ಕರಾವಳಿ ಪಾಲಿಗೆ ಒಂದು ಕ್ರಾಂತಿಕಾರಿ ದಿನವಾಗಿದೆ. ರೇಡಿಯೋ ನಿರೂಪಕಿಯಾಗಿ ಮಂಗಳಮುಖಿಯೊಬ್ಬರು ಕರಾವಳಿಯ ಜನರ ಮನೆ ಮನ ತಲುಪಲಿದ್ದಾರೆ.

    ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು ರೇಡಿಯೊ‌ ನಿರೂಪಕಿಯಾಗುವ ಮೂಲಕ ಹೊಸತೊಂದು ಸಾಧನೆ ಮಾಡಲು ಮುಂದಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜು ನಡೆಸುವ ರೇಡಿಯೊ ಸಾರಂಗ್ 107.8 ಎಫ್‌ಎಂ ಇವರಿಗೆ ಅವಕಾಶವನ್ನು ನೀಡಿದೆ.

    ಮೂಲತಃ ಮಂಡ್ಯ ಜಿಲ್ಲೆಯವರಾದ ಕಾಜಲ್ ತನ್ನ 14ನೇ ವಯಸ್ಸಿನಲ್ಲಿ ಮಂಗಳಮುಖಿಯಾಗಿ ಬದಲಾದರು. ನಂತರ ಪಿಯುಸಿ ವಿಧ್ಯಾಭ್ಯಾಸವನ್ನು ಮುಗಿಸಿದ ಅವರು ಪಿಯುಸಿಯಲ್ಲಿ ಶೇಕಡ 85 ರಷ್ಟು ಅಂಕವನ್ನು ಪಡೆದಿದ್ದರು. ಜೀವನೋಪಾಯಕ್ಕಾಗಿ ಮುಂಬಯಿಯಲ್ಲಿ ಬಾರ್ ಡ್ಯಾನ್ಸರ್ ಆಗಿ ಸೇರಿಕೊಂಡ ಅವರು ಸ್ವಲ್ಪಕಾಲ ಸರ್ಕಸ್ ಕಂಪೆನಿಯೊಂದರಲ್ಲಿ ಡ್ಯಾನ್ಸರ್ ಆಗಿ ಕಾರ್ಯನಿರ್ವಹಿಸಿದ್ದರು.

    ಕರಾವಳಿಗೆ ಒಂದು ಕಾರ್ಯಕ್ರಮಕ್ಕೆ ಬಂದಾಗ ಇಲ್ಲಿನ ಜನರು ತೋರಿಸಿದ ಪ್ರೀತಿ ಇವರನ್ನು ಕರಾವಳಿಯಲ್ಲೆ ಉಳಿಯುವಂತೆ ಮಾಡಿತು. ಈಗ ಸದ್ಯ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಒಂಬತ್ತು ವರ್ಷಗಳಿಂದ ವಾಸಿಸುತ್ತಿದ್ದಾರೆ. ಪಿಯುಸಿವರೆಗೆ ಶಿಕ್ಷಣವನ್ನು ಮುಗಿಸಿರುವ ಇವರು ಈಗ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

    ಕಾಜಲ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇದ್ದು, ಅವರು ರಂಗಭೂಮಿಯ ನಾಟಕಗಳಲ್ಲಿ ಕೆಲಸ ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಈ ನಡುವೆ ಖಾಸಗಿ ಕಾಲೇಜು ನಡೆಸುವ ಎಫ್ ಎಂ ರೆಡಿಯೋ ಚಾನೆಲ್ ಗೆ ನಿರೂಪಕಿಯಾಗುವ ಅವಕಾಶ ಬಂದಾಗ ಒಪ್ಪಿಕೊಂಡರು. ಇದೇ ಬರುವ ನವೆಂಬರ್ 21 ರಂದು ಅವರ ಮೊದಲ ಕಾರ್ಯಕ್ರಮ ಸಾರಂಗ್ 107.8 ಎಫ್ ಎಂ ನಲ್ಲಿ ಕೇಳಿ ಬರಲಿದೆ.

    ಇವರ ಮೊದಲ ಕಾರ್ಯಕ್ರಮದಲ್ಲಿ ಇವರು ತನ್ನಂತೆ ಇರುವ ಮಂಗಳಮುಖಿಯವರನ್ನು ಸಂದರ್ಶಿಸಲಿದ್ದಾರೆ. ಮಂಗಳಮುಖಿಯವರ ಸಾಮಾಜಿಕ ಜೀವನ ಹಾಗೂ ಅವರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply