ಮುಖ್ಯಮಂತ್ರಿಗೆ ಹಣಕಾಸಿನ ಇಲಾಖೆಯ ಬಗ್ಗೆ ಜ್ಞಾನವೇ ಇಲ್ಲ – ಸಿದ್ದರಾಮಯ್ಯ

ಮಂಗಳೂರು ಅಕ್ಟೋಬರ್ 5: ಹಣಕಾಸಿನ ಇಲಾಖೆಯ ಬಗ್ಗೆ ಜ್ಞಾನವೇ ಇಲ್ಲದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಲು ಸಾಧ್ಯವೇ ಇಲ್ಲ. ಪ್ರತಿ ತಿಂಗಳು ಬೊಕ್ಕಸಕ್ಕೆ ತೆರಿಗೆ ಹರಿದು ಬರುತ್ತಿದೆ. ಬೊಕ್ಕಸದ ಪರಿಸ್ಥಿತಿ ಕುರಿತು ಯಡಿಯೂರಪ್ಪ ಅವರಿಗೆ ಸರಿಯಾದ ಜ್ಞಾನ ಇದ್ದಂತಿಲ್ಲ ಎಂದರು.

ಪ್ರವಾಹ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ತುರ್ತಾಗಿ 5,000 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ 1,200 ಕೋಟಿ ನೀಡಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರವೇ ತನ್ನ ಬೊಕ್ಕಸದ ಹಣವನ್ನು ಬಳಕೆ ಮಾಡಬೇಕಿತ್ತು. ಅದನ್ನೂ ಸರಿಯಾಗಿ ಮಾಡಿಲ್ಲ ಎಂದು ಟೀಕಿಸಿದರು.

VIDEO