ಶಿವಮೊಗ್ಗ ,ಮಾರ್ಚ್ 1: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ಜಂಟಿ ದಾಳಿ ಬಗ್ಗೆ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು ಇಸ್ರೇಲ್ ಮತ್ತು ಅಮೆರಿಕದವರು ಇರಾನ್ ಮತ್ತು ಖಮೇನಿ ಮೇಲೆ ಮಾಡಿರುವ ಯುದ್ಧ ಅನಗತ್ಯವಾದದ್ದು. ಒಂದು ಕಡೆ ಡೋನಾಲ್ಡ್ ಟ್ರಂಪ್ ಅವರು ಶಾಂತಿಮಂತ್ರ ಹೇಳುತ್ತಾರೆ. ಇನ್ನೊಂದು ಕಡೆ ಯುದ್ಧವನ್ನು ಮಾಡುತ್ತಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಖಮೇನಿಯವರು ಹತ್ಯೆಯಾಗಿರುವ ಬಗ್ಗೆ ಟಿವಿಯಲ್ಲಿ ವರದಿಗಳು ಬರ್ತಾ ಇದೆ. ಇದು ಖಂಡನೀಯವಾದ ವಿಚಾರ. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಇನ್ನು ಯುದ್ಧ ಆರಂಭವಾದ ಮೇಲೆ ಕನ್ನಡಿಗರು ಸಿಲುಕಿಕೊಂಡಿದ್ದಾರೆ, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.

Share Information