ಮಾಧ್ಯಮಗಳ ವಿರುದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾಮಂಡಲ

ಮಂಗಳೂರು ಎಪ್ರಿಲ್ 7: ಮೈತ್ರಿ ಸರಕಾರ ರಚನೆಯಾದ ದಿನದಿಂದ ಮಾಧ್ಯಮಗಳು ಯಾವ ಮಟ್ಟಕ್ಕೆ ನನಗೆ ಹಿಂಸೆ ನೀಡಿದ್ದೀರಿ, ನಿಮ್ಮ ಹಿಂಸೆಯ ಮಟ್ಟವನ್ನು 9 ತಿಂಗಳ ಘಟನೆಗಳನ್ನು ರಿವೈಂಡ್ ಮಾಡಿ ನೋಡ್ಕೊಳ್ಳಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆತ್ತಿರುವ ಹಾಗೆ ತೋರಿಸುತ್ತಾ ಇದ್ದಾರೆ. ನನ್ನನ್ನು ಯಾವ ರೀತಿ ಮುಗಿಸಬೇಕೆಂದ ಮಾಧ್ಯಮಗಳ ವ್ಯವಸ್ಥಾಪಕರು ಒದ್ದಾಡ್ತಿದ್ದಾರೆ.

ಮಾಧ್ಯಮಗಳ ವ್ಯವಸ್ಥಾಪಕರಿಗೆ ನನ್ನ ಮೇಲೆ ಯಾಕೆ ಕೋಪ ಇದೆ ಅಂತ ಗೊತ್ತಿಲ್ಲ ಎಂದು ಹೇಳಿದ ಅವರು ಮಾಧ್ಯಮಗಳಲ್ಲಿ ನನ್ನ ವಿರುದ್ಧವಾಗಿ ತೋರಿಸುತ್ತಾರೆ. ಮಂಡ್ಯದ ಬಗ್ಗೆ ನನ್ನ ಹೇಳಿಕೆ ಒಂದೆಡೆ ಹಾಕಿದ್ರೆ ಮತ್ತೊಂದೆಡೆ ಬೇರೆ ಹಾಕ್ತಾರೆ, ಈಗಿನ ಮಾಧ್ಯಮಗಳಿಗೆ ಎಥಿಕ್ಸ್ ಇದ್ಯಾ? ಎಂದು ಪ್ರಶ್ನಿಸಿದರು.

ಮಂಡ್ಯ ಅಭ್ಯರ್ಥಿ ನಿಖಿಲ್‌ಗೆ ಮಾಧ್ಯಮದಲ್ಲಿ ನೀಡಿದ ಪ್ರಚಾರ ಸಮಾಧಾನಕರವಾಗಿದ್ಯಾ? ಚುನಾವಣೆಯ ಮಂಡ್ಯದಲ್ಲಿ ಮಾತ್ರ ನಡೀವಂತೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪ್ರಿಲ್ 13ಕ್ಕೆ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದು ಅದೇ ದಿನ ರಾಹುಲ್ ಗಾಂಧಿ ಅವರ ಕಾರ್ಯಕ್ರಮ ನಡೆಯಲಿದೆ. 13ನೇ ತಾರೀಕಿನಂದು ಅವರ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರ್ಯಕ್ರಮ ಕ್ಲ್ಯಾಶ್ ಆಗುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.

ಜಿಲ್ಲೆಗೆ ಮೋದಿ ಬಂದು ಬಂದು ಏನು ಸಂದೇಶ ಕೊಡ್ತಾರೆ? ಜಿಲ್ಲೆಗೆ ಪೂರಕವಾದ ಸಂಸ್ಥೆಗಳನ್ನು ಮುಚ್ಚಿಕೊಂಡು ಬಂದಿದ್ದಾರೆ. ಮೋದಿ ಮುಖ‌ ನೋಡಿ ಓಟ್ ಹಾಕೋದಾದ್ರೆ ಜನರಿಗೆ ಏನ್ ಕೊಟ್ಟಿದ್ದಾರೆ ಬೇಕಲ್ವಾ ಎಂದು ಪ್ರಶ್ನಿಸಿದರು. ಮೋದಿ ಕೊಟ್ಟ ಕೊಡುಗೆ ಏನು? ರಾಜ್ಯಕ್ಕೆ ಬಿಡಿ, ಮಂಗಳೂರಿಗೆ ಏನು ಕೊಟ್ಟಿದ್ದಾರೆ, ನಷ್ಟದಲ್ಲಿಲ್ಲದಿದ್ರೂ ಏರ್ ಪೋರ್ಟ್ ಕೂಡಾ ಖಾಸಗಿಗೆಯವರಿಗೆ ಕೊಟ್ಟಿದ್ದಾರೆ. ವಿಜಯಾಬ್ಯಾಂಕ್ ಕೂಡಾ ಬರೋಡಾ ಬ್ಯಾಂಕ್ ಜತೆ ವಿಲೀನ ಮಾಡಿದ್ದಾರೆ. ಇದಕ್ಕೆ ಮೋದಿಗೆ ಓಟ್ ಹಾಕಬೇಕಾ? ಇದು ಮಂಗಳೂರಿನ ಜನರ ಸ್ವಾಭಿಮಾನದ ಪ್ರಶ್ನೆಎಂದು ಹೇಳಿದರು.