ಬೆಳ್ತಂಗಡಿ, ಮಾರ್ಚ್ 28: 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೇಬಲ್ ವಿಜಯ ರೈ ಅವರು ಆಯ್ಕೆಯಾಗಿದ್ದಾರೆ.

ವಿಜಯ ರೈ ಅವರು ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿಯ ಸೀತಾರಾಮ ರೈ ಅವರ ಪುತ್ರರಾಗಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಯರ್ಡೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಅವರ ಪತ್ನಿ ಅನುಷಾ ಅವರು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.