ಕಾಸರಗೋಡು ಸೆಪ್ಟೆಂಬರ್ 17: ಶರಣಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಕುಂಡಂಗುಳಿ ಸರಕಾರಿ ಹೈಯರ್‌ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಮಂಗಳವಾರ ದೇವಿಕಾಳ ತಂದೆ ಸತೀಶ್ ರ ಪುಣ್ಯತಿಥಿ ದಿನದಂದೇ ಕೃತ್ಯ ನಡೆದಿದೆ. ಬೆಳಿಗ್ಗೆ ಅಜ್ಜಿ ಮತ್ತು ಸಹೋದರ ಮಾತ್ರ ಮನೆಯಲ್ಲಿದ್ದಾಗ ಘಟನೆ ನಡೆದಿದೆ. ತಾಯಿ ಸವಿತಾ ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪ ಹೊಟೇಲ್ ಒಂದನ್ನು ನಡೆಸುತ್ತಿದ್ದಾರೆ.

ಬೆಳಿಗ್ಗೆ ದೇವಿಕಾ ನಾಪತ್ತೆಯಾದ ಹಿನ್ನಲೆಯಲ್ಲಿ ಸಹೋದರ ಶೋಧ ನಡೆಸಿದಾಗ ಮನೆಯ ಕೊಣೆಯೊಂದರಲ್ಲಿ ಸೀರೆಯಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ದೇವಿಕಾ ಕ್ರಿಯಾಶೀಲ ಹುಡುಗಿ ಎನಿಸಿದ್ದರು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ದೇವಿಕಾ ಅವರ ತಂದೆ ಸತೀಶ್ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ಮಾಹಿತಿ ಪ್ರಕಾರ ದೇವಿಕಾಗೆ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಗಿದ್ದು, ಕಾಞಂಗಾಡ್‌ನ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು ಎಂದು ಹೇಳಲಾಗಿದೆ.

Share Information