ಮಿಲಾದುನ್ನಬಿ ರಾಲಿ ಸಂದರ್ಭ ಹೊಡೆದಾಟ

ಮಂಗಳೂರು ನವೆಂಬರ್ 20: ಮಿಲಾದುನ್ನಬಿ ರಾಲಿ ಸಂದರ್ಭದಲ್ಲಿ ಎರಡು ತಂಡಗಳ ನಡುವೆ ಕುತ್ತಾರು ಸಂತೋಷ್ ನಗರದಲ್ಲಿ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮಿಲಾದುನ್ನಬಿ ಪ್ರಯುಕ್ತ ಮದಕದ ತಂಡದವರು ಸಂತೋಷ ನಗರಕ್ಕೆ ಬಂದು ರಾಲಿ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಶ್ನಿಸಿದ ಸಂತೋಷ್ ನಗರದ ತಂಡದ ಮೇಲೆ ಮದಕ ತಂಡದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಿಲಾದುನ್ನಬಿ ರಾಲಿಯಲ್ಲಿ ಪಾಲ್ಗೊಂಡ ಎರಡು ತಂಡಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಎರಡು ಗುಂಪು ಚದುರಿಸಿದ್ದಾರೆ. ಸದ್ಯ ಸಂತೋಷ್ ನಗರದಲ್ಲಿ ಪೊಲೀಸ್ ಬಿಗು ಬಂದೋಬಸ್ತು ಮಾಡಲಾಗಿದೆ.

Facebook Comments

comments