ಪುತ್ತೂರು ಸೆಪ್ಟೆಂಬರ್ 13: ಪುತ್ತೂರಿನ ದರ್ಬೆ ವೃತ್ತದ ಬಳಿ ಹಿಂದೂ ಜಾಗರಣ ವೇದಿಕೆ ಮುಖಂಡರೊಬ್ಬರಿಗೆ ಪುತ್ತಿಲ ಪರಿವಾರದ ಮುಖಂಡನಿಗೆ ಹಲ್ಲೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಿಂದೂ ಜಾಗರಣ ವೇದಿಕೆ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಈ ಹಲ್ಲೆ ನಡೆದಿರುವ ಹಿಂದೆ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಕೈವಾಡವಿಲ್ಲ ಎಂದಿದ್ದಾರೆ.

ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಹಿಂದೂ ಜಾಗರಣ ವೇದಿಕೆ ಈ ಹಲ್ಲೆ ವೈಯುಕ್ತಿಕ ವಿಚಾರವಾಗಿ ನಡೆದಿದೆ ಎಂದು ಪುತ್ತಿಲ ಪರಿವಾರದ ಮುಖಂಡರಿಂದ ಸ್ಪಷ್ಟನೆ ನೀಡಿದ್ದಾರೆ. ವಾಟ್ಸಪ್ ಗ್ರೂಪ್ ಗಳಲ್ಲಿ ಹಿಂದೂ ಜಾಗರಣ ವೇದಿಕೆಯಲ್ಲಿನ ಕೆಲವು ಗೊಂದಲಗಳ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಹಲ್ಲೆ ಆರೋಪ ಎದುರಿಸುತ್ತಿರುವ ಅಶೋಕ್ ಅವರು ಸಂಘಟನೆಯವರು ಮದ್ಯ ಸೇವನೆ ಬಿಡಬೇಕು ಎಂದಿದ್ದರು. ಇದರಿಂದ ಕೆರಳಿದ ಸುಭಾಸ್ ಮುಕ್ವೆ ಅಶೋಕ್ ಅವರನ್ನು ದರ್ಬೆ ವೃತ್ತಕ್ಕೆ ಕರೆದಿದ್ದರು. ಅಲ್ಲಿಗೆ ಬಂದ ಅಶೋಕ್ ಜೊತೆ ಸುಭಾಸ್ ಅನುಚಿತವಾಗಿ ವರ್ತಿಸಿದ್ದರು ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ.
ಈ ವಿಚಾರವನ್ನು ಹಿಂದೂ ಜಾಗರಣ ವೇದಿಕೆಯ ಮುಖಂಡರಿಗೆ ತಿಳಿಸಲಾಗಿತ್ತು. ಪ್ರಕರಣವನ್ನು ರಾಜಿ ಮಾತುಕತೆಯಲ್ಲಿ ಮುಗಿಸಲು ಪ್ರಯತ್ನಿಸಲಾಗಿತ್ತು. ಆದರೆ ಜಾಗರಣ ವೇದಿಕೆಯ ಕೆಲವು ಮುಖಂಡರು ಇದಕ್ಕೆ ಒಪ್ಪಿಲ್ಲ, ವೈಯುಕ್ತಿಕ ವಿಚಾರವನ್ನು ಬಿಜೆಪಿ, ಪುತ್ತಿಲ ಪರಿವಾರದ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾರೆ, ಅಲ್ಲದೆ ಮಾದ್ಯಮಗಳಿಗೂ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ರಾಜಿ ಮಾತುಕತೆಗೆ ಒಪ್ಪದ ಹಿನ್ನಲೆಯಲ್ಲಿ ಅಶೋಕ್ ಅವರೂ ಸುಭಾಸ್ ಮೇಲೆ ಪ್ರತಿದೂರು ನೀಡಿದ್ದಾರೆ. ಈ ಹಲ್ಲೆ ಪ್ರಕರಣಕ್ಕೆ ಬಿಜೆಪಿ,ಪುತ್ತಿಲ ಪರಿವಾರದ ಮಧ್ಯೆ ಇರುವ ಗೊಂದಲ ಕಾರಣವಲ್ಲ ಎಂದು ಸ್ಪಷ್ಟನೆ ನೀಡಲಾಗಿದ್ದು, ಪುತ್ತೂರಿನಲ್ಲಿರುವ ರಾಜಕೀಯ ಗೊಂದಲಕ್ಕೆ ಜಾಗರಣ ವೇದಿಕೆಯ ಪ್ರಮುಖರು ಶೀಘ್ರವೇ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.



