Connect with us

    LATEST NEWS

    68 ದಿನಗಳ ಬಳಿಕ ರಸ್ತೆಗಿಳಿದ ಖಾಸಗಿ ಬಸ್

    ಉಡುಪಿ ಜುಲೈ 01: ಕೊರೊನಾ ಹಿನ್ನಲೆ ಲಾಕ್ ಡೌನ್ ನಂತರ ಬರೋಬ್ಬರಿ 68 ದಿನಗಳ ಬಳಿಕ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡದಲ್ಲಿ ಖಾಸಗಿ ಬಸ್ ಸಂಚಾರ ಆರಂಭಿಸಿದೆ.


    ಕೊರೊನಾ ಪ್ರಕರಣ ಇಳಿಕೆಯ ಹಿನ್ನಲೆ ರಾಜ್ಯ ಸರಕಾರ ಜೂನ್ 22 ರ ನಂತರ ಷರತ್ತು ಬದ್ದವಾಗಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು, ಆದರೆ ತಾಂತ್ರಿಕ ಕಾರಣ ಹಾಗೂ ತೆರಿಗೆ ವಿನಾಯಿತಿ, ಬಸ್ ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಖಾಸಗಿ ಬಸ್ ಮಾಲಕರು ಸರಕಾರದ ಜೊತೆ ಮಾತುಕತೆ ನಂತರ ಇಂದಿನಿಂದ ತಮ್ಮ ಸಂಚಾರ ಆರಂಭಿಸಲು ನಿರ್ಧರಿಸಿದ್ದರು, ಮೊದಲ ದಿನ ಹಿನ್ನಲೆ ಕೆಲವು ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಸಂಚರಿಸುತ್ತಿದ್ದು. ಸರ್ವಿಸ್, ಸಿಟಿ ಬಸ್ ಗಳ ಮೂಲಕ ಜನರು ಓಡಾಟ ಆರಂಭಿಸಿದ್ದಾರೆ.


    ಇನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಆದೇಶದ ಪ್ರಕಾರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಲಾಕ್ ಡೌನ್ ವಿನಾಯಿತಿ ಇದೆ. ಜಿಲ್ಲಾಡಳಿತ ಈಗಾಗಲೇ ನೀಡಿರುವ ಆದೇಶದ ಪ್ರಕಾರ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ಬಸ್ ಕಾರ್ಯಚರಿಸಲು ಅವಕಾಶ ಇದೆ. ಸಿಟಿ ಮತ್ತು ಖಾಸಗಿ ಬಸ್ ದರ ಈಗಾಗಲೇ ಶೇ.20 ರಷ್ಟು ಏರಿಕೆ ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply