ಮಂಗಳೂರಿನಲ್ಲಿ ಸಡಗರ, ಭಕ್ತಿ ಭಾವದ ಕ್ರಿಸ್ಮಸ್

ಮಂಗಳೂರು ಡಿಸೆಂಬರ್ 25: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸ0ದೇಶ ಸಾರಿದ ದೇವ ಪುತ್ರ ಯೇಸುಕ್ರಿಸ್ತರ ಜನ್ಮಾದಿನಾಚರಣೆಯನ್ನು ಪೂರ್ವದ ರೋಮ್ ಎಂದೇ ಜನಜನಿತವಾದ ಕರಾವಳಿ ನಗರ ಮಂಗಳೂರಿನಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.

ಹಬ್ಬದ ಸಲುವಾಗಿ ನಗರದ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳು ಜಗಮಗಿಸುವ ವಿದ್ಯುತ್ ದೀಪಗಳಿ0ದ ಶೃಂಗಾರಗೊಂಡಿತ್ತು. ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಸಡಗರ, ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಪೂಜೆಗಳು ನಡೆದವು. ಸಾವಿರಾರು ಕ್ರೈಸ್ತ್ ಭಾಂಧವರು ಭಕ್ತಿಯಿಂದ ಪೂಜೆ ಮತ್ತು ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರು.

ನಿನ್ನೆ ರಾತ್ರಿ ನಗರದ ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ, ಬಲಿ ಪೂಜೆ, ಕ್ಯಾರಲ್ಸ್,ಗಳೊಂದಿಗೆ ಕ್ರಿಸ್ತನ ಜನ್ಮ ಸಂಭ್ರಮವನ್ನು ಆಚರಿಸಲಾಯಿತು. ಹೊಸ ಉಡುಗೆ ತೊಡುಗೆಗಳೊಂದಿಗೆ ಚರ್ಚ್ ಗಳಿಗೆ ತೆರಳಿದ ಕ್ರೈಸ್ತಭಾಂಧವರು ಕ್ರಿಸ್ ಮಸ್ ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವ ಮೂಲಕ ಸಮಾರಂಭಕ್ಕೆ ಶ್ರೀಕಾರ ಬರೆದರು.

ಮಂಗಳೂರಿನ ನೂತನ ಧರ್ಮಧ್ಯಕ್ಷರಾದ ವಂದನೀಯ ಡಾ.ಪೀಟರ್ ಪಾವ್ಲ್ ಅವರು ತಮ್ಮ ಅಧಿಕೃತ ಚರ್ಚ್ ರೋಜಾರಿಯೋ ಕಥೆಡ್ರಲ್‌ನಲ್ಲಿ ಇತರ ಧರ್ಮಗುರುಗಳೊಂದಿಗೆ ಸಂಭ್ರಮದ ಬಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಿಷಪ್ ತಮ್ಮ ಕ್ರಿಸ್‌ಮಸ್ ಸಂದೇಶದಲ್ಲಿ ಜಗತ್ತಿಗೆ ಪ್ರೀತಿ – ತ್ಯಾಗದ ಸಂದೇಶ ತಂದಿರುವ ಪ್ರಭು ಯೇಸುಕ್ರಿಸ್ತರ ಜನ್ಮ ದಿನ ನಾಡಿಗೆ ಶಾಂತಿ, ನೆಮ್ಮದಿ ಮತ್ತು ಸಹೋದರತೆಯ ಭಾವ ತರಲಿ ಎಂದು ಹರಸಿದರು.

ಮಂಗಳೂರಿನ ಇನ್ನೋದು ಪ್ರಮುಖ ಪುಣ್ಯ ಕ್ಷೇತ್ರವಾದ ಬಿಕರ್ಣಕಟ್ಟೆಯ ಬಾಲ ಯೇಸು ಮಂದಿರದಲ್ಲೂ ಕ್ರಿಸ್ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿತ್ತು. ಬಾಲ ಯೇಸು ಮಂದಿರದ ವಿಶಾಲ ಮೈದಾನಿನಲ್ಲಿ ಕ್ರಿಸ್‌ಮಸ್ ಹಬ್ಬ ಪ್ರಯುಕ್ತ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಸಾವಿರಾರು ಭಕ್ತರು ಭಕ್ತಿ ಮತ್ತು ಶೃದ್ದೆಯಿಂದ ಪಾಲ್ಗೊಂಡಿದ್ದರು.

ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಕುಲಶೇಖರ ಹೋಲಿ ಕ್ರಾಸ್ ಚರ್ಚ್‌ಗಳಲ್ಲೂ ಸಹಸ್ರಾರು ಕ್ರೈಸ್ತ ಬಾಂಧವರು ಸೇರಿ ವಿಶೇಷ ಪ್ರಾರ್ಥನೆ ನಡೆಸಿದರು. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚರ್ಚ್‌ಗಳನ್ನು ಬಣ್ಣ ಬಣ್ಣದ ದೀಪಗಳಿಂದ, ಮಿನುಗುವ ನಕ್ಷತ್ರಗಳಿಂದ ಅಲಂಕರಿಸಲಾಗಿತ್ತು.
ನಗರದ ನಾನಾ ಮಳಿಗೆಗಳು, ಮಾಲ್‌ಗಳಲ್ಲಿ ಕೇಕ್ ಮತ್ತು ಕ್ರಿಸ್‌ಮಸ್ ತಿಂಡಿಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಸಾಂತಾಕ್ಲಾಸ್ ಧಿರಿಸು ತೊಟ್ಟ ಕ್ರೈಸ್ತ ಬಾಂಧವರು ಎಲ್ಲೆಡೆ ಕಂಡು ಬಂದರು. ಕ್ರಿಸ್‌ಮಸ್ ಟ್ರೀಗಳು, ಟ್ಯಾಬ್ಲೊಗಳು ಮಳಿಗೆ ಮಾಲ್‌ಗಳಿಗೆ ವಿಶೇಷ ಕಳೆ ನೀಡಿದ್ದವು.

2 Shares

Facebook Comments

comments