DAKSHINA KANNADA
ದಕ್ಷಿಣ ಕನ್ನಡದಲ್ಲಿ ಕಾಲರಾ ರೋಗ ಭೀತಿ, ಮೂಡುಬಿದಿರೆಯಲ್ಲಿ ಮೊದಲ ಪ್ರಕರಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್..!
ಮಂಗಳೂರು : ದಕ್ಷಿಣ ಕನ್ನಡದಲ್ಲಿ ಕಾಲರಾ ರೋಗದ ಭೀತಿ ಎದುರಾಗಿದೆ. ಜಿಲ್ಲೆಯ ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ವ್ಯಕ್ತಿಯೋರ್ವನಲ್ಲಿ ಸೋಂಕು ಪತ್ತೆಯಾಗಿದ್ದು ಆತಂಕ ಮನೆಮಾಡಿದೆ. ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್ ನಿಂದ ಸೊಂಕು ಸಾಮೂಹಿಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
ಹೊಸ್ಮಾರುವಿನ ಹೋಟೆಲ್ನಿಂದ ಕಾಲರಾ ಸೊಂಕು ಸಾಮೂಹಿಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ.ಸೋಂಕು ಪತ್ತೆ ಹಿನ್ನಲೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಮಂಗಳೂರು ನಗರದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿದ್ದೇವೆ ಎಂದಿದ್ದಾರೆ. ಕಾಲರಾ ಸೋಂಕು ಪ್ರಮುಖವಾಗಿ ಕಲುಷಿತ ಆಹಾರದಿಂದ ಹರಡುವ ಸಾಧ್ಯತೆ ಇದ್ದು ಕಡ್ಡಾಯವಾಗಿ ಆಹಾರ ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಲು ಸೂಚನೆ ನೀಡಿದ್ದೇವೆ. ಕಲುಷಿತ ಆಹಾರ, ಹಳಸಿದ ಆಹಾರವನ್ನ ಗ್ರಾಹಕರಿಗೆ ನೀಡಬಾರದು. ಪ್ರಮುಖವಾಗಿ ತರಕಾರಿ, ಹಣ್ಣು ಹಂಪಲು ಗುಣಮಟ್ಟವನ್ನ ಕಾಪಾಡಬೇಕು. ಗ್ರಾಹಕರಿಗೆ ನೀಡುವ ಪಾತ್ರೆ ಪ್ಲೇಟ್ ಗಳನ್ನ ಬಿಸಿ ನೀರಿನಲ್ಲಿ ತೊಳೆಯಬೇಕು. ಬೇಸಿಗೆ ಸಂದರ್ಭದಲ್ಲಿ ಶುದ್ಧ ನೀರು ಬಳಸಬೇಕು. ಬೇಯಿಸದ ಆಹಾರವನ್ನ ಬಳಕೆ ಮಾಡುವುದನ್ನ ಕಡಿಮೆ ಮಾಡಬೇಕೆಂದ ಅವರು ಆಹಾರ ಸ್ವಲ್ಪ ಕಲುಷಿತವಾದರೂ ಕಾಲರಾ ಅಪಾಯವಿದೆ. ಪಂಚಾಯತ್ ರಾಜ್, ವ್ಯಾಪ್ತಿ ನೀರಿನ ತೊಟ್ಟಿಗಳ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕ್ಲೋರಿನೇಷನ್ ಹಾಗೂ ಸೂಪರ್ ಕ್ಲೋರಿನೇಷನ್ ಮಾಡಬೇಕು ಎಂದು ಚೂಚನೆ ನೀಡಿದ್ದೇವೆ. ಕಲುಷಿತ ಆಹಾರ ಸೇವನೆ ಮಾಡೋದ್ರಿಂದ ಕಾಲರಾ ಸೋಂಕು ಹರಡುತ್ತೆ. ತುಂಬಾ ವಾಂತಿ ಭೇದಿಯಾಗಿ ವ್ಯಕ್ತಿ ಸಾವನ್ನಪ್ಪವ ಆತಂಕ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕಾಲರಾ ಸಾಮಾನ್ಯವಾಗಿ ಕಲುಷಿತ ನೀರಿನಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ. ಕಾಲರಾ ತೀವ್ರ ಅತಿಸಾರ ಮತ್ತು ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾಲರಾ ಕೆಲವೇ ಗಂಟೆಗಳಲ್ಲಿ ಮಾರಣಾಂತಿಕವಾಗಬಹುದು, ಹಿಂದೆ ಆರೋಗ್ಯವಂತ ಜನರಲ್ಲೂ ಸಹ.
ಆಧುನಿಕ ಒಳಚರಂಡಿ ಮತ್ತು ನೀರಿನ ಸಂಸ್ಕರಣೆಯು ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಕಾಲರಾವನ್ನು ವಾಸ್ತವಿಕವಾಗಿ ತೆಗೆದುಹಾಕಿದೆ. ಆದರೆ ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಹೈಟಿಯಲ್ಲಿ ಕಾಲರಾ ಇನ್ನೂ ಅಸ್ತಿತ್ವದಲ್ಲಿದೆ. ಬಡತನ, ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳು ಸಾಕಷ್ಟು ನೈರ್ಮಲ್ಯವಿಲ್ಲದೆ ಕಿಕ್ಕಿರಿದ ಪರಿಸ್ಥಿತಿಗಳಲ್ಲಿ ವಾಸಿಸಲು ಜನರನ್ನು ಒತ್ತಾಯಿಸಿದಾಗ ಕಾಲರಾ ಸಾಂಕ್ರಾಮಿಕದ ಅಪಾಯವು ಹೆಚ್ಚು.
ಕಾಲರಾವನ್ನು ಸುಲಭವಾಗಿ ಚಿಕಿತ್ಸೆ ನೀಡಲಾಗುತ್ತದೆ. ತೀವ್ರ ನಿರ್ಜಲೀಕರಣದಿಂದ ಸಾವನ್ನು ಸರಳ ಮತ್ತು ಅಗ್ಗದ ಮರುಜಲೀಕರಣ ಪರಿಹಾರದೊಂದಿಗೆ ತಡೆಯಬಹುದು.
You must be logged in to post a comment Login