Connect with us

LATEST NEWS

ಚಿಕನ್ ಶೋರ್ಮಾ ಸೇವಿಸಿ ಓರ್ವ ವಿಧ್ಯಾರ್ಥಿನಿ ಸಾವು – ಇಬ್ಬರು ಅರೆಸ್ಟ್

ಕಾಸರಗೋಡು ಮೇ 02: ಚಿಕನ್ ಶೋರ್ಮಾ ಸೇವಿಸಿ ಓರ್ವ ವಿಧ್ಯಾರ್ಥಿನಿ ಸಾವನಪ್ಪಿರುವ ಫಟನೆ ಕಾಸರಗೋಡಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿ 15 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರ್ಮಾ ಅಂಗಡಿಯ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಕರಿವೆಳ್ಳೂರು ಪೆರಳಂ ನಿವಾಸಿ ನಾರಾಯಣನ್-ಪ್ರಸನ್ನ ದಂಪತಿ ಪುತ್ರಿ ದೇವನಂದಾ(16) ಮೃತ ವಿದ್ಯಾರ್ಥಿನಿ. ಚೆರ್ವತ್ತೂರಿನ ತಂಪು ಪಾನೀಯ ಅಂಗಡಿಯೊಂದರಲ್ಲಿ (ಕೂಲ್ ಬಾರ್) 15 ವಿದ್ಯಾರ್ಥಿಗಳು ಶನಿವಾರ ಚಿಕನ್ ಶವರ್ಮ ಸೇವಿಸಿದ್ದರು. ನಂತರ ಇವರಲ್ಲಿ ವಾಂತಿ, ಹೊಟ್ಟೆನೋವು, ಜ್ವರ ಕಾಣಿಸಿಕೊಂಡಿತು. ಹಲವು ಆಸ್ಪತ್ರೆಗಳಲ್ಲಿ ಇವರನ್ನು ದಾಖಲಿಸಲಾಗಿತ್ತು.

ಅಸ್ವಸ್ಥರಾದ ದೇವನಂದ ಅವರನ್ನು ಭಾನುವಾರ ಬೆಳಗ್ಗೆ ಚೆರ್ವತ್ತೂರಿನ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ, ಆಕೆಯನ್ನು ಕಾಞಂಗಾಡಿನಲ್ಲಿರುವ ಕಾಸರಗೋಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಬದುಕಲಿಲ್ಲ. ದೇವನಂದಾ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಪ್ಲಸ್ ವನ್ ತರಗತಿಗಾಗಿ ಟ್ಯೂಷನ್‌ಗೆ ತೆರಳುತ್ತಿದ್ದಳು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ 14 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ

Advertisement
Click to comment

You must be logged in to post a comment Login

Leave a Reply