Connect with us

LATEST NEWS

ಚಾಮುಂಡಿ ದೇವಿ ಪಾತ್ರಧಾರಿ ಮೈಮೇಲೆ ಬಂದ ಚಾಮುಂಡಿ …ರಾಕ್ಷಸ ಪಾತ್ರಧಾರಿ ವಧೆಗೆ ಮುಂದಾದ ಪಾತ್ರಧಾರಿ

ಮಂಡ್ಯ: ಪೌರಾಣಿಕ ನಾಟಕದ ಸಂದರ್ಭ ಚಾಮುಂಡಿ ದೇವಿ ಪಾತ್ರಧಾರಿ ಮಹಿಳೆಯ ಮೇಲೆ ಅವ್ವಾಹನೆಯಾಗಿ..ರಾಕ್ಷಸ ಪಾತ್ರಧಾರಿ ಮೇಲೆ ತ್ರಿಶೂಲ ಹಿಡಿದು ಸಂಹರಿಸಲು ಹೋದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮಂಡ್ಯದ ಕಲಾಮಂದಿರದಲ್ಲಿ ಫೆಬ್ರವರಿ 6 ರಂದು ಪೌರಾಣಿಕ ಕೌಂಡಲಿಕನ ವಧೆ ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ಈ ಸಂದರ್ಭ ರಾಕ್ಷಸ ಸಂಸಾರ ಸನ್ನಿವೇಶದ ವೇಳೆ ಚಾಮುಂಡಿ ದೇವಿ ಪಾತ್ರಧಾರಿ ಇದು ನಾಟಕ ಎಂಬುದನ್ನೂ ಮರೆತು ನಿಜವಾಗಿಯೂ ವಧೆಗೆ ಮುಂದಾದರು. ಆ ವ್ಯಕ್ತಿ ಮೇಲೆ ಸಾಕ್ಷಾತ್​ ಚಾಮುಂಡಿ ತಾಯಿ ಆಹ್ವಾಹನೆ ಆಗಿತ್ತು ಎನ್ನಲಾಗಿದೆ.


ಪ್ರತೀ ಬಾರಿ ಈ ನಾಟಕ ನಡೆದಾಗಲೆಲ್ಲಾ ಚಾಮುಂಡಿ ಪಾತ್ರಧಾರಿ ಮೇಲೆ ತಾಯಿಯ ಆಹ್ವಾಹನೆ ಆಗುತ್ತೆಂಬ ನಂಬಿಕೆ ಇದೆ. ಈ ಭಾರಿಯೂ ಕೌಂಡಲಿಕನ ವಧೆ ಮಾಡುವ ಸನ್ನಿವೇಶದ ವೇಳೆ ಚಾಮುಂಡೇಶ್ವರಿ ದೇವಿಯ ಪಾತ್ರಧಾರಿ ಮೇಲೆ ದೇವಿ ಆಹ್ವಾಹನೆ ಆಗಿತ್ತು. ಕೌಂಡಲಿಕನ ಪಾತ್ರಧಾರಿಯನ್ನು ನಿಜವಾಗಿ ಕೊಲ್ಲಲು ಮುಂದಾಗಿದ್ದರು. ಇದನ್ನರಿತ ನಾಟಕ ಆಯೋಜಕರು, ಯಾವುದೇ ಕೆಟ್ಟ ಘಟನೆ ಸಂಭವಿಸಬಾರದು ಎಂಬ ಉದ್ದೇಶಕ್ಕೆ ಚಾಮುಂಡಿ ಪಾತ್ರಧಾರಿಯನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದಿದ್ದಾರೆ. ಈ ಸಂದರ್ಭದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.