ಉಪ್ಪಿನಂಗಡಿ ಫೆಬ್ರವರಿ 14: ಮಂಡ್ಯ ಡಿಎಚ್‍ಒ ಮೈಸೂರು ಅಬಕಾರಿಗೆ ಇಲಾಖೆಗೆ ವರ್ಗಾವಣೆ ಮಾಡಿದ ಆದೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಇದೆ. ಅದು ನಿಮ್ಮ ಸಹಿ ಅಥವಾ ಅಲ್ಲವೋ ಅದನ್ನು ಮೊದಲು ಹೇಳಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.

ಉಪ್ಪಿನಂಗಡಿ ಮಾತನಾಡಿದ ಅವರು ವರ್ಗಾವಣೆ ಆದೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಇದೆ, ದಿನಾಂಕ ಇಲ್ಲ, ಕಚೇರಿಯ ನಂಬರ್ ಇಲ್ಲ, ಆದ್ರೆ ಅದು ಸತ್ಯವೋ ಅಸತ್ಯವೋ?, ಇದು ಫೇಕ್ ಲೆಟರೋ ಅಥವಾ ರಿಯಲ್ ಲೆಟರೋ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳ್ಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿ ಹೌದಾ ಅಲ್ಲವಾ?, ಒಂದು ವೇಳೆ ಅಲ್ಲ ಅಂತ ಆದ್ರೆ ನಿಮ್ಮ ಕಚೇರಿಯವರು ಸೃಷ್ಟಿ ಮಾಡಿದ್ದಾ? ಬೇರೆ ಯಾರೂ ಮಾಡ್ಲಿಕೆ ಸಾಧ್ಯ ಇಲ್ಲ, ನಿಮ್ಮ ಸಹಿಯನ್ನ ಬೇರೆ ಯಾರೂ ಮಾಡ್ಲಿಕೆ ಹೇಗಾಗುತ್ತೆ? ಅದನ್ನ ನೀವು ಸಿಕ್ಕಿಬಿದ್ದ ಮೇಲೆ ಒಂದು ಕಂಪ್ಲೇಂಟ್ ಕೊಡ್ತಿರಾ ನನ್ನ ಕಂಪ್ಯೂಟರ್ ನಿಂದ ಬೇರೆ ಯಾರೋ ಕದ್ದಿದ್ದಾರೆ ಅಂತೀರಾ, ಹಾಗಾದ್ರೆ ಕದ್ದಿದ್ದಾರೆ ಅಂದ ಮೇಲೆ ನಿಮ್ಮ ಕಂಪ್ಯೂಟರ್ ನಲ್ಲೇ ನಿಮ್ಮ ಸಹಿ ಹಾಕಿದ್ದು ಇದೆ ಅಂತಾಯ್ತು ಎಂದರು.
ಅದನ್ನು ಬಿಟ್ಟು ನಿಮ್ಮ ಮನೆಯಲ್ಲಿ ಏನೇ ತೊಂದರೆ ಆದ್ರೂ ಅದಕ್ಕೆ ಬಿಜೆಪಿ ಸುನೀಲ್ ಕುಮಾರ್, ರವಿ ಕುಮಾರ್, ಸಿಟಿ ರವಿ, ಚಲವಾದಿ ನಾರಾಯಣ ಸ್ವಾಮಿ, ಅಶೋಕ್, ವಿಜಯೇಂದ್ರ ಕಾರಣನಾ? ಎಂದು ಪ್ರಶ್ನಿಸಿದ ಅವರು ಮೊದಲು ನಿಮ್ಮ ದ್ವಂಧ್ವ ನೀತಿಯನ್ನು ಬಿಡಿ ಸಿದ್ದರಮಾಯ್ಯನವ್ರೇ ಎಂದರು.



