ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಸೀಸನ್ 12 ಈಗಾಗಲೇ 80 ದಿನಗಳನ್ನು ಪೂರೈಸಿದೆ, ಈ ನಡುವೆ ಸೀಸನ್ ಗೆ ವೈಲ್ಟ್ ಕಾರ್ಡ್ ಎಂಟ್ರಿ ತೆಗೆದುಕೊಂಡಿದ್ದ ಚೈತ್ರಾ ಕುಂದಾಪುರ ಮೊದಲ ವಾರದಲ್ಲಿ ಸೈಲೆಂಟ್ ಇದ್ದವರು ಇದೀಗ ಮತ್ತೆ ತಮ್ಮ ಹಳೆಯ ಸ್ಟೈಲ್ ಗೆ ಮರಳಿದ್ದಾರೆ.

ಚೈತ್ರಾ ಕುಂದಾಪುರ ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಈ ಸೀಸನ್ ಅಲ್ಲಿ ಅತಿಥಿಯಾಗಿ ದೊಡ್ಮನೆಗೆ ತೆರಳಿದ್ದ ಅವರು ನಂತರ ಸ್ಪರ್ಧಿ ಆದರು. ಇದೀಗ ಈ ವಾರ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಕಳೆದ ಸೀಸನ್ ಆಟವನ್ನೇ ಚೈತ್ರಾ ರಿಪೀಟ್ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಕಳೆದ ಸೀಸನ್ ಅಲ್ಲಿ ಅನೇಕ ಬಾರಿ ಅತ್ತಿದ್ದು ಇದೆ. ಈ ಸಂದರ್ಭದಲ್ಲಿ ಅವರು ದೇವರಿಗೆ ದೀಪ ಹಚ್ಚಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಅವರು ಬಂದು ಕೆಲ ವಾರ ಕಳೆದಿದ್ದರು ಈ ರೀತಿ ಎಂದಿಗೂ ಮಾಡಿರಲಿಲ್ಲ. ಆದರೆ, ಈ ವಾರ ಅವರು ಆ ರೀತಿ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ರಜತ್ ಅವರ ಮಾತು.

ರಜತ್ ಅವರು ಈ ವಾರ ಚೈತ್ರಾ ಕುಂದಾಪುರ ಜೊತೆ ಜಗಳ ಆಡಿದರು. ಆಟದ ಮಧ್ಯೆ ಅವರನ್ನು ಸುಳ್ಳಿ ಎಂದು ಕರೆದರು. ಕಳೆದ ಸೀಸನ್ ಅಲ್ಲಿ ಅನೇಕರು ಚೈತ್ರಾ ಅವರನ್ನು ಸುಳ್ಳಿ ಎಂದು ಕರೆದಿದ್ದು ಇದೆ. ಈ ಬಾರಿಯೂ ಅದೇ ಟ್ಯಾಗ್ನಿಂದ ಚೈತ್ರಾನ ಕರೆದಿದ್ದಕ್ಕೆ ಅವರಿಗೆ ಬೇಸರ ಆಗಿದೆ. ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ.
ಗಿಲ್ಲಿ ಹಾಗೂ ರಜತ್ ಅವರು ಸೋಫಾ ಏರಿಯಾದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ದೇವರ ಎದುರು ಬಂದು ಕಣ್ಣೀರು ಹಾಕಿದ್ದಾರೆ. ಕುಂಕುಮ ಹಚ್ಚಿಕೊಳ್ಳುವಾಗ ಅವರು ಗಿಲ್ಲಿ ಹಾಗೂ ರಜತ್ ಕಡೆ ನೋಡಿದ್ದಾರೆ. ಅವರು ತಮ್ಮನ್ನೇ ನೋಡುತ್ತಿದ್ದಾರೆ ಎಂಬುದನ್ನು ಚೈತ್ರಾ ಖಚಿತ ಮಾಡಿಕೊಂಡಂತಿತ್ತು. ಈ ವಿಷಯವನ್ನು ರಾಶಿಕಾ ಕೂಡ ದೊಡ್ಮನೆಯಲ್ಲಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಮಾಡಲಾಗಿದೆ.



