Connect with us

LATEST NEWS

ಉಸಿರಾಟದ ತೊಂದರೆ ದೆಹಲಿ ಏಮ್ಸ್ ಆಸ್ಪತ್ರೆಗೆ ಅಮಿತ್ ಶಾ ದಾಖಲು

ನವದೆಹಲಿ ಸೆಪ್ಟೆಂಬರ್ 13:ಕೊರೊನಾ ಹಿನ್ನಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಎರಡು ವಾರಗಳು ಕಳೆದ ನಂತರ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಕಳೆದ ತಡರಾತ್ರಿ 11 ಗಂಟೆ ಸುಮಾರಿಗೆ ಅಮಿತ್ ಶಾ ದಾಖಲಾಗಿದ್ದು ಅವರನ್ನು ಸಿಎನ್ ಟವರ್ ನಲ್ಲಿ ಅಂದರೆ ವಿವಿಐಪಿಗಳಿಗೆ ಮೀಸಲಾಗಿರುವ ವ್ಯವಸ್ಥಾ ಕೊಠಡಿಯಲ್ಲಿ ಇರಿಸಲಾಗಿದೆ. ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೆರಿಯಾ ಅವರು ಅಮಿತ್ ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪರಿಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 2ರಂದು ಕೋವಿಡ್-19 ಸೋಂಕು ಪತ್ತೆಯಾದ ನಂತರ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಅವರಿಗೆ ಸಮಸ್ಯೆ ತಲೆದೋರಿತ್ತು. ನಂತರ ಆಗಸ್ಟ್ 18ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾದರು. ಆಗಲೂ ಅವರಿಗೆ ಉಸಿರಾಟದ ಸಮಸ್ಯೆ ತಲೆದೋರಿತ್ತು

Facebook Comments

comments