Connect with us

    DAKSHINA KANNADA

    ಕೇಂದ್ರ ಸರಕಾರದ ದಿಟ್ಟ ಹೆಜ್ಜೆ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದು

    ಕೇಂದ್ರ ಸರಕಾರದ ದಿಟ್ಟ ಹೆಜ್ಜೆ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದು

    ಮಂಗಳೂರು, ಅಗಸ್ಟ್ 05: ಕೇಂದ್ರದ ನರೇಂದ್ರ ಮೋದಿ ಸರಕಾರ ಕಾಶ್ಮೀರದಲ್ಲಿ ಜಾರಿಯಲ್ಲಿರುವ 370 ಮತ್ತು 33 ಎ ಪರಿಚ್ಛೇದವನ್ನು ರದ್ದುಗೊಳಿಸಿದೆ.

    ಈ ನಿರ್ಧಾರದ ಮೂಲಕ ಇಡೀ ದೇಶಕ್ಕೆ ಅನ್ವಯಿಸುವ ಸಂವಿಧಾನ ಕಾಶ್ಮೀರಕ್ಕೂ ಅನ್ವಯಿಸಲಿದೆ. 370 ಹಾಗೂ 35 ಎ ಜಾರಿಯಲ್ಲಿದ್ದ ಕಾರಣ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು.

    ದೇಶದ ಯಾವುದೇ ಕಾನೂನು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗುತ್ತಿರಲಿಲ್ಲ.

    ಅಲ್ಲದೆ ಕಾಶ್ಮೀರದಲ್ಲಿ ಕಾಶ್ಮೀರದ ನಾಗರಿಕನಲ್ಲದೆ, ದೇಶದ ಯಾವುದೇ ವ್ಯಕ್ತಿಯೂ ಆಸ್ತಿ-ಪಾಸ್ತಿಗಳನ್ನು ಖರೀದಿಸುವಂತಿರಲಿಲ್ಲ.

    ಇದೀಗ ಈ ಎರಡೂ ಪರಿಚ್ಛೇದಗಳನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಒಂದೇ ರೀತಿಯ ಕಾನೂನು ಜಾರಿಯಾಗುವಂತೆ ಕೇಂದ್ರ ಸರಕಾರ ಮಾಡಿದೆ.

    ಇನ್ನು ಮುಂದೆ ಜಮ್ಮು-ಕಾಶ್ಮೀರ ರಾಜ್ಯವಾಗಿರದೆ, ಕೇಂದ್ರಾಡಳಿತ ಪ್ರದೇಶವಾಗಲಿದೆ.

    ಲಡಾಕ್ ಕೂಡಾ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಗೃಹ ಸಚಿವ ಅಮಿತ್ ಶಾ ಈ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಈ ನಿರ್ಧಾರದಿಂದ ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕೇಂದ್ರ ಸರಕಾರ ಕಳೆದ ಎರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ಕಾಶ್ಮೀರದಲ್ಲಿ ನಿಯೋಜಿಸುವ ಪ್ರಕ್ರಿಯೆಯನ್ನು ನಡೆಸಿದೆ.

    ಕೇಂದ್ರದ ಈ ನಿರ್ಧಾರಕ್ಕೆ ಕಾಂಗ್ರೇಸ್ ಸೇರಿದಂತೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದು, ಸದನದಲ್ಲಿ ಭಾರೀ ಕೋಲಾಹಲವನ್ನೂ ನಡೆಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply