ಮಂಗಳೂರು, ಜೂನ್ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ “ವಿಕಸಿತ ಭಾರತ – ವಿಶ್ವಾಸ, ವಿಕಾಸ ಮತ್ತು ಜನಕಲ್ಯಾಣಕ್ಕೆ 12 ವರ್ಷಗಳು” ಪೂರೈಸಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬೃಹತ್ “ಸಾಧನಾ ಪ್ರದರ್ಶಿನಿ ಹಾಗೂ ಜನಕಲ್ಯಾಣ ಶಿಬಿರ”*ವನ್ನು ಜೂನ್ 25 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ವಿಶೇಷ ಪ್ರದರ್ಶನ ಮತ್ತು ಶಿಬಿರವು 25 ಜೂನ್ 2026, ಗುರುವಾರದಂದು ಮಂಗಳೂರಿನ ಬಿಜ್ಜೈನಲ್ಲಿರುವ KSRTC ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10:00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಈ ಪ್ರದರ್ಶನಿ ಹಾಗೂ ಜನಕಲ್ಯಾಣ ಶಿಬಿರವು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯ ತನಕ ತೆರೆದಿರಲಿದೆ. ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳು, ದೇಶದ ಸರ್ವತೋಮುಖ ಅಭಿವೃದ್ಧಿಯ ಮೈಲಿಗಲ್ಲುಗಳ ಮಾಹಿತಿ ಹಾಗೂ ಸಾರ್ವಜನಿಕರಿಗೆ ನೇರ ಪ್ರಯೋಜನ ಸಿಗುವಂತಹ ಶಿಬಿರಗಳು ಒಂದೇ ಸೂರಿನಡಿ ಲಭ್ಯವಿರಲಿದೆ.