ಉಡುಪಿ ಡಿಸೆಂಬರ್ 26: ನೇಮೋತ್ಸವಕ್ಕೆ ನೋಡಲು ಬಂದಿದ್ದ ವೃದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಮೂವರು ಕಳ್ಳಿಯರು ಸೇರಿ ಕದ್ದ ಘಟನೆ ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆದಿದ್ದು, ದೈವಸ್ಥಾನದಲ್ಲಿದ್ದ ಸಿಸಿಟಿವಿಯಲ್ಲಿ ಕಳ್ಳಿಯರ ಕರಾಮತ್ತು ದಾಖಲಾಗಿದೆ.

ಮೂವರು ಮಹಿಳೆಯರು ಹೆಜಮಾಡಿ ನಿವಾಸಿಯಾದ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಪೊಲೀಸರು ಮಹಿಳೆಯರ ಪತ್ತೆಗೆ ಮುಂದಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://youtube.com/shorts/wBQNq0Ni1kM



