ಯುವಕನ ಬಲಿ ತೆಗೆದುಕೊಂಡ ಸಿಡಿಲಿನ ದೃಶ್ಯ

ಪುತ್ತೂರು ಫೆಬ್ರವರಿ 8: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರ ವಸತಿಗೃಹ ಬಳಿ ಸಿಡಿಲು ಬಡಿದು ಯುವಕ ಸಾವನಪ್ಪಿದ್ದ ಘಟನೆಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಯ ತಾಲೂಕಿನ ಹರಿಹರ ನಿವಾಸಿ ಪ್ರವೀಣ್ (21) ಮೃತ ದುರ್ದೈವಿಯಾಗಿದ್ದು, ನಿನ್ನೆ ವಸತಿಗೃಹ ಬಳಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದ್ದು, ಪ್ರವೀಣ್ ಸಂಪೂರ್ಣ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌.

VIDEO

Facebook Comments

comments