LATEST NEWS
ನನಗೆ ಯಾವುದೇ ನೋಟಿಸ್ ಬಂದಿಲ್ಲ – ನಟಿ ಕಂ ಆಂಕರ್ ಅನುಶ್ರೀ ಪ್ರತಿಕ್ರಿಯೆ
ಮಂಗಳೂರು ಸೆಪ್ಟೆಂಬರ್ 24: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ಜಾರಿ ಬಗ್ಗೆ ನಿರೂಪಕಿ ಅನುಶ್ರಿ ಪ್ರತಿಕ್ರಿಯೆ ನೀಡಿದ್ದು, ಇಲ್ಲಿಯವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವ ನೋಟಿಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟಿಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರು ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ.
ನಮ್ಮ ಮನೆಗೆ ಯಾರೂ ಬಂದಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್ ಇಬ್ಬರೂ ನನಗೆ ಪರಿಚಯ. ನಾನು ಇವರ ಯಾವುದೇ ಪಾರ್ಟಿಗಳಿಗೆ ಹೋಗಿರಲಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ, ನನಗೆ ಯಾವುದೇ ಆತಂಕವಿಲ್ಲ. ಎಂದು ಅನುಶ್ರೀ ಹೇಳಿದ್ದಾರೆ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್ಗೆ ಕಾಲ್ ಮಾಡಿ ವರ್ಷಗಳೇ ಆಗಿವೆ. ಕಳೆದ 2-3 ವರ್ಷಗಳಿಂದ ನಾನು ಅವರನ್ನು ಭೇಟಿಯಾಗಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್ ವ್ಯವಹಾರಗಳ ಬಗ್ಗೆ ಮಾಹಿತಿ ಇಲ್ಲ. ಸಿಸಿಬಿ ನೋಟಿಸ್ ಸಿಕ್ಕ ಕೂಡಲೇ ವಿಚಾರಣೆಗೆ ಹಾಜರಾಗ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
Facebook Comments
You may like
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ..!?
-
ನಟಿ ಶೃತಿ ಹಾಸನ್ ಜೊತೆ ಗಾಯಕ ಸಂಚಿತ್ ಹೆಗ್ಡೆ ಲಿಪ್ ಲಾಕ್….!!
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
You must be logged in to post a comment Login