ಜಾರ್ಖಂಡ್ ಜನವರಿ 22: ರೈಲು ಬರುತ್ತಿದ್ದರು ಕ್ರಾಸಿಂಗ್ ಮಾಡಲು ಹೋದ ಟ್ರಕ್ ಗೆ ರೈಲೊಂದು ಡಿಕ್ಕಿ ಹೊಡೆದ ಘಟನೆ ಗುರುವಾರ ಜಾರ್ಖಂಡ್ನ ದಿಯೋಘರ್ನಲ್ಲಿ ರೈಲ್ವೆ ಕ್ರಾಸಿಂಗ್ನಲ್ಲಿ ಸಂಭವಿಸಿದೆ,. ಘಟನೆಯಲ್ಲಿ ಟ್ರಕ್ ಮತ್ತು ಎರಡು ದ್ವಿಚಕ್ರವಾಹನಗಳಿಗೆ ಹಾನಿಯಾಗಿದೆ.

ಮಾಹಿತಿ ಪ್ರಕಾರ ರೈಲು ಬರುವ ಮಾಹಿತಿ ಬಂದ ನಂತರ ರೋಹಿಣಿ-ನವಾಡಿಹ್ ರೈಲ್ವೆ ಗೇಟ್ ಮುಚ್ಚಲಾಗುತ್ತಿತ್ತು, ವಾಹನ ಸವಾರರು ಮಾತ್ರ ವಾಹನಗಳನ್ನು ನಿಲ್ಲಿಸದೇ ಕ್ರಾಸಿಂಗ್ ಮಾಡಲು ಹೋಗಿದ್ದಾರೆ. ಈ ವೇಳೆ ಟ್ರಕ್ ಕೂಡ ಕ್ರಾಸಿಂಗ್ ಮಾಡಲು ಹೋಗಿತ್ತು. ಈ ವೇಳೆ ಜಸಿದಿಹ್ನಿಂದ ಅಸನ್ಸೋಲ್ಗೆ ಹೋಗುತ್ತಿದ್ದ ಗೊಂಡಾ-ಅಸನ್ಸೋಲ್ ಪ್ಯಾಸೆಂಜರ್ ರೈಲು ಬಂದಿದೆ. . ರೈಲು ಬರುವುದನ್ನು ನೋಡಿ ಟ್ರಕ್ ಚಾಲಕ ಟ್ರಕ್ ಅನ್ನು ಟ್ರ್ಯಾಕ್ ನಿಂದ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ರೈಲು ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಮೋಟಾರ್ ಸೈಕಲ್ ಸವಾರರು ತಮ್ಮ ಬೈಕ್ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ, ಆದರೆ ಟ್ರಕ್ ಚಾಲಕ ಕೂಡ ಸುರಕ್ಷಿತವಾಗಿ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆಯ ಸಮಯದಲ್ಲಿ ಕ್ರಾಸಿಂಗ್ನಲ್ಲಿ ನಿಂತಿದ್ದ ಜನರು ಇಡೀ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಟ್ರಕ್ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.

ಪ್ಯಾಸೆಂಜರ್ ರೈಲಿನ ಲೋಕೋಪೈಲೆಟ್ ರೈಲಿನ ವೇಗವನ್ನು ತಗ್ಗಿಸಿದ್ದರಿಂದ ಹೆಚ್ಚಿನ ಅಪಘಾತ ಸಂಭವಿಸಿಲ್ಲ. ಅಪಘಾತದಿಂದಾಗಿ ದಿಯೋಘರ್-ಗಿರಿಧಿ ಮುಖ್ಯ ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು. ರೈಲುಗಳು ಮತ್ತು ಟ್ರಕ್ಗಳು ಹಳಿಗಳ ಮೇಲೆ ನಿಂತಿದ್ದರಿಂದ, ಈ ಮಾರ್ಗದಲ್ಲಿ ಮೂರು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತು ಎಂದು ವರದಿಯಾಗಿದೆ. ಸದ್ಯ ಅಪಘಾತದ ದೃಶ್ಯ ವೈರಲ್ ಆಗಿದೆ.