Connect with us

LATEST NEWS

ದನದ ವ್ಯಾಪಾರಿಯ ಸಂಶಯಾಸ್ಪದ ಸಾವು, ತನಿಖೆಗೆ ಕುಟುಂಬಸ್ಥರ ಒತ್ತಾಯ

ದನದ ವ್ಯಾಪಾರಿಯ ಸಂಶಯಾಸ್ಪದ ಸಾವು, ತನಿಖೆಗೆ ಕುಟುಂಬಸ್ಥರ ಒತ್ತಾಯ

ಉಡುಪಿ, ಮೇ 30: ದನದ ವ್ಯಾಪಾರಿಯೊಬ್ಬರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಈ ಶವ ಪತ್ತೆಯಾಗಿದ್ದು, ಹಿರಿಯಡ್ಕ ಪೋಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ತೆಯಾದ ಮೃತದೇಹ ಮಂಗಳೂರಿನ ಜೋಕಟ್ಟೆ ನಿವಾಸಿ ಹಸನಬ್ಬ (65) ಎಂಬವರದೆಂದು ಗುರುತಿಸಲಾಗಿದೆ.

ನಿನ್ನೆ ತಡರಾತ್ರಿ ದನ ಸಾಗಿಸುತ್ತಿದ್ದ ವೇಳೆ ಪೋಲೀಸರು ವಾಹನವೊಂದನ್ನು ಅಡ್ಡಗಟ್ಟಿದ್ದರು.

ಈ ಸಂದರ್ಭದಲ್ಲಿ ಪೋಲೀಸರ ಕಣ್ತಪ್ಪಿಸಿ ನಾಲ್ವರು ಓಡಿ ಹೋಗಿದ್ದರು. ಈ ಪೈಕಿ ಹಸನಬ್ಬ ಅವರ ಶವ ಇಂದು ಬೆಳಿಗ್ಗೆ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

ಸಾವಿನ ಬಗ್ಗೆ ಹಸನಬ್ಬ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು, ಪೋಲೀಸರು ದನದ ವಾಹನವನ್ನು ತಡೆಯುವ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಇದ್ದರೆಂದು ಆರೋಪಿಸಿದ್ದಾರೆ.

ಹೃದಯದ ಸಮಸ್ಯೆ ಇರುವುದರಿಂದ ಹೃದಯಾಘಾತದಲ್ಲಿ ಸಾವನ್ನಪ್ಪಿರುವು ಸಾಧ್ಯತೆಯೂ ಹೆಚ್ಚಾಗಿದೆ.

ಕುಟುಂಬ ವರ್ಗದವರ ಸಂಶಯದ ಹಿನ್ನಲೆಯಲ್ಲಿ ಶವವನ್ನು ಇದೀಗ ಮಣಿಪಾಲ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಲು ಇಡಲಾಗಿದ್ದು, ಶವಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ಸ್ಪಷ್ಟ ಕಾರಣವೇನು ಎನ್ನುವುದು ತಿಳಿಯಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *