LATEST NEWS
ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ವಿರುದ್ದ ಅವಹೇಳನ – ಕಾನೂನು ಕ್ರಮಕ್ಕೆ ಬಿಲ್ಲವ ಸಂಘಟನೆಗಳ ಒತ್ತಾಯ
ಮಂಗಳೂರು ಫೆಬ್ರವರಿ 6: ಕಾರ್ಯಕ್ರಮವೊಂದರಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ದ ಕಾನೂನು ಕ್ರಮಕ್ಕೆ ಮೂಡುಬಿದಿರೆ ಬಿಲ್ಲವ ಸಂಘದ ವಿವಿಧ ಘಟಕಗಳ ಮುಖಂಡರು ಪೊಲೀಸರು ದೂರು ನೀಡಿದ್ದಾರೆ.
ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣ ಮಾಡುವ ವೇಳೆ, ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಜಗದೀಶ್ ಅಧಿಕಾರಿಯವರ ಮಾತುಗಳ ವಿಡಿಯೋ ವೈರಲ್ ಆಗಿದೆ. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಆದರೆ ಮಾತಿನ ನಂತರ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್ನಲ್ಲಿ ರೆಕಾರ್ಡ್ ಆಗಿದೆ. ತನ್ನೊಂದಿಗೆ ಇದ್ದವರೊಂದಿಗೆ ಮಾತನಾಡಿರುವ ಅಡಿಯೋ ದಾಖಲೆಯಲ್ಲಿದ್ದು, ಬಿಲ್ಲವ ಸಮುದಾಯ ವಿರುದ್ಧ ಮಾತನಾಡಿರುವುದು, ಕೋಟಿ ಚೆನ್ನಯರ ಕಥೆಯನ್ನು ಅನ್ಯ ರೀತಿಯಲ್ಲಿ ಹೇಳಿರುವುದರಿಂದ ಬಿಲ್ಲವ ಸಮುದಾಯದವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
You must be logged in to post a comment Login