ಮಡಿಕೇರಿ,ಫೆಬ್ರವರಿ 25: ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಬದಿಯ 20 ಅಡಿ ಆಳದ ಗದ್ದೆಗೆ ಉರುಳಿ ಬಿದ್ದ ಘಟನೆ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಎಂಬ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪ್ಪಂಗಳ ನಿವಾಸಿ ಕಾರಿನ ಚಾಲಕ ಸಾಗರ್ ಮತ್ತವರ ತಾಯ ಅಪಾಯದಿಂದ ಪಾರಾದ ಪ್ರಯಾಣಿಕರಾಗಿದ್ದಾರೆ. ಸಾಗರ್ ಅವರು ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಬೆಟ್ಟಗೇರಿ ಮಡಿಕೇರಿ ಮುಖ್ಯರಸ್ತೆಯ ಹಂಪ್ಸ್ ಬಳಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ರಸ್ತೆ ಬದಿಯ 20 ಅಡಿ ಆಳದ ಗದ್ದೆಗೆ ಕಾರು ಉರುಳಿ ಬಿದ್ದು ಸಂಪೂರ್ಣ ಜಂಗೊಂಡಿದೆ.
ಘಟನೆಯಲ್ಲಿ ಸಾಗರ್ ಹಾಗೂ ಅವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ತಾಯಿ ಮತ್ತು ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



