Connect with us

LATEST NEWS

ಹಾಡುಹಗಲೇ ಕಾರಿನ ಗ್ಲಾಸ್ ಒಡೆದು 15 ಲಕ್ಷ ಲೂಟಿ ಮಾಡಿದ ಕಳ್ಳರು

ಹಾಡುಹಗಲೇ ಕಾರಿನ ಗ್ಲಾಸ್ ಒಡೆದು 15 ಲಕ್ಷ ಲೂಟಿ ಮಾಡಿದ ಕಳ್ಳರು

ಮಂಗಳೂರು ಡಿಸೆಂಬರ್ 13: ಕಾರಿನ ಗಾಜು ಒಡೆದು ಹಾಡುಹಗಲೇ 15 ಲಕ್ಷ ರೂಪಾಯಿ ನಗದನ್ನು ಕಳ್ಳರು ಎಗರಿಸಿರುವ ಘಟನೆ ಮಂಗಳೂರಿನ ಲೆಡಿಹಿಲ್ ವೃತ್ತದ ಬಳಿ ನಡೆದಿದೆ.

ರಿಜ್ವಾನ್ ಎಂಬವರು ಪತ್ನಿ ಜೊತೆ ಬ್ಯಾಂಕ್ ಗೆ ಹಣ ತಂದಿದ್ದರು. ಈ ಸಂದರ್ಭ ಲೆಡಿಹಿಲ್ ನ ಸೌತ್ ಇಂಡಿಯನ್ ಬ್ಯಾಂಕ್ ಬಳಿ ಕಾರು ನಿಲ್ಲಿಸಿ ಬ್ಯಾಂಕ್ ಗೆ ತೆರಳಿದ್ದರು.

ಈ ಸಂದರ್ಭ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿ 15 ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ. ಘಟನೆ ಕುರಿತಂತೆ ಉರ್ವಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Facebook Comments

comments