ಕಾಸರಗೋಡು ಜನವರಿ 05: ಬಸ್ ಒಂದನ್ನು ಓವರ್ ಟೆಕ್ ಮಾಡಲು ಹೋಗಿ ಸ್ಕೂಟರ್ ಸವಾರ ರಸ್ತೆಯಲ್ಲಿ ಬಿದ್ದಿದ್ದು. ಈ ವೇಳೆ ಎದುರಿಗೆ ಬರುತ್ತಿದ್ದ ಕಾರು ಸ್ಕೂಟರ್ ಸವಾರನ ಜೀವ ಉಳಿಸುವ ಸಲುವಾಗಿ ಕಾರನ್ನು ರಸ್ತೆಯ ಬದಿಗೆ ತಿರುಗಿಸಿ ಮನೆಯೊಂದರ ಕಂಪೌಂಡ್ ಗೆ ಡಿಕ್ಕಿ ಹೊಡೆದ ಘಟನೆ ಕಾಸರಗೋಡಿನ ಚೋಯಿಯಂಕೋಡ್ ಬಳಿಯ ಮಂಜಲಂಕೋಡ್‌ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಸ್ಕೂಟರ್ ಸವಾರನ ಜೀವ ಉಳಿಸಲು ಕಾರಿನ ಚಾಲಕನ ತನ್ನ ಜೀವದ ಹಂಗು ತೊರೆದು ಕಾರು ತಿರುಗಿಸಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.


ಕರಿಂಥಲಂನ ಕೊಲ್ಲಂಪಾರದ ನಿವಾಸಿ ಮತ್ತು ಚೀಮೇನಿಯ ರಾಯಲ್ ಹೋಮ್ಸ್ ಮಾಲೀಕ ಮುಖೇಶ್ ಭಾಸ್ಕರನ್ ಅವರು ತಮ್ಮ ಮನೆಯಿಂದ ತಮ್ಮ ಅಂಗಡಿಗೆ ಕಾರಿನಲ್ಲಿ ಹೋಗುತ್ತಿದ್ದರು. ಸ್ಕೂಟರ್ ಸವಾರ ಚೈಯೋತ್ ಪೆನ್ಷನ್ ಮುಕ್ಕು ನಿವಾಸಿ ವಿ.ವಿ. ಶಶಿಕುಮಾರ್ ಎಂಬುವರ ಖಾಸಗಿ ಬಸ್ ನ್ನು ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಎದುರಿನಿಂದ ಕಾರು ಬರುತ್ತಿದ್ದನ್ನು ನೋಡಿ ಬ್ರೇಕ್ ಹಾಕಲು ಹೋಗಿದ್ದಾರೆ. ಈ ವೇಳೆ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಇದೇ ವೇಳೆ ಕಾರಿನಲ್ಲಿದ್ದ ಮುಖೇಶ್ ಅವರು ಕೂಡಲೇ ಕಾರನ್ನು ರಸ್ತೆಯಿಂದ ತಿರುಗಿಸಿದ್ದಾರೆ. ಕಾರು ರಸ್ತೆ ಬದಿಯಲ್ಲಿ ಇರುವ ಮನೆಯೊಂದರ ಕಂಪೌಂಡ್ ಗೊಡೆಗೆ ಡಿಕ್ಕಿ ಹೊಡೆದು ನಿಂತಿದೆ.


ಈ ಅಪಘಾತದಲ್ಲಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಸ್ಕೂಟರ್ ಚಾಲಕ ಶಶಿಕುಮಾರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಚಾಲಕ ಮುಖೇಶ್ ಅವರ ಸಮಯ ಪ್ರಜ್ಞೆಯಿಂದ ಓರ್ವನ ಜೀವವನ್ನು ಉಳಿಸಿದ್ದಾರೆ. ಕೆಲವು ಸೆಕೆಂಡ್ ಹೆಚ್ಚುಕಮ್ಮಿ ಆಗಿದ್ದರೆ ಸ್ಕೂಟರ್ ಸವಾರನ ಮೇಲೆ ಕಾರು ಹರಿದು ದೊಡ್ಡ ಅನಾಹುತ ಸಂಭವಿಸುತ್ತಿತ್ತು, ಅಲ್ಲದೆ ಕಾರು ಕೂಡ ಮನೆಯೊಂದರ ಕಂಪೌಂಡೆ ಗುದ್ದಿದ್ದರು, ಚಾಲಕನಿಗೆ ಯಾವುದೇ ಗಾಯಗಳಾದೇ ಬಚಾವ್ ಆಗಿದ್ದಾರೆ.
ಕಾರಿನ ಚಾಲಕ ಮುಖೇಶ್ ಅವರು ಒಂದು ಜೀವ ಉಳಿಸುವ ಸಲುವಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟಿದ್ದರು, ಹೆಚ್ಚು ಕಮ್ಮಿ ಆಗಿದ್ದರೂ ಕಾರಿನ ಚಾಲಕನ ಜೀವಕ್ಕೂ ಅಪಾಯ ಇತ್ತು. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಾರಿನ ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Share Information