Connect with us

LATEST NEWS

ಮುಲ್ಕಿ ಕೊಳ್ನಾಡ್ ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅಕಸ್ಮಿಕ..!

ಮಂಗಳೂರು: ಮಂಗಳೂರು ಹೊರವಲಯದ  ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.


ಈ ಸಂದರ್ಭ ಎಚ್ಚೆತ್ತ ಕಾರಿನ ಚಾಲಕ ಕಾರ್ನಾಡು ನಿವಾಸಿ ಮಹಮ್ಮದ್ ಫಯಾಝ್ ಎಂಬುವವರು ಕಾರು ಬದಿಗೆ ಸರಿಸಿ ತಕ್ಷಣ ಕಾರಿನಿಂದ ಹೊರ ಬಂದಿದ್ದಾರೆ. ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣ ಹೊತ್ತಿ ಉರಿಯಲಾರಂಭಿಸಿದೆ.


ಘಟನೆಯಿಂದ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಕೂಡಲೇ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ನಿಯಂತ್ರಿಸಿ ಏಕಮುಖ ರಸ್ತೆಯಲ್ಲಿಯೇ ವಾಹನ ಸಂಚರಿಸುವಂತೆ ಅನುವು ಮಾಡಿದರು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹಳೆಯಂಗಡಿಯ ಪೂಜಾ ಅರೇಂಜರ್ಸ್ ಮಾಲಕ ಜಯಕೃಷ್ಣ ಸುವರ್ಣ ಎಂಬುವವರು ತಮ್ಮ ಟ್ಯಾಂಕರ್ ನಲ್ಲಿ ನೀರು ತರಿಸಿ ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ, ನಂತರ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.