LATEST NEWS
ಬೈಂದೂರು ಸಮೀಪ ಕಾರುಗಳ ಮಖಾಮುಖಿ ಡಿಕ್ಕಿ ಭಟ್ಕಳ ಮೂಲದ ಹೊಟೇಲ್ ಉದ್ಯಮಿ ಮೃತ್ಯು
ಬೈಂದೂರು ಸಮೀಪ ಕಾರುಗಳ ಮಖಾಮುಖಿ ಡಿಕ್ಕಿ ಭಟ್ಕಳ ಮೂಲದ ಹೊಟೇಲ್ ಉದ್ಯಮಿ ಮೃತ್ಯು
ಉಡುಪಿ ಅಗಸ್ಟ್ 31: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಓರ್ವ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ನಾಯ್ಕನಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಭಟ್ಕಳ ಮೂಲದ ನೂರುಲ್ ಅಮೀನ್ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ನಾಯ್ಕನಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಭಟ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ನೂರುಲ್ ಅಮೀನ್ ಅವರ ಕಾರು ರಸ್ತೆಯ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಕಡೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇನ್ನೊಂದು ಕಾರಿನಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.