ಉಡುಪಿ ಸೆಪ್ಟೆಂಬರ್ 24: ಬೈಂದೂರು ಬಿಜೆಪಿಯಲ್ಲಿನ ಭಿನ್ನಮತ ಇದೀಗ ಸಾರ್ವಜನಿಕವಾಗಿಯೇ ಕಾಣಿಸಿಕೊಂಡಿದೆ. ಶಾಸಕ ಗುರುರಾಜ ಗಂಟಿಹೊಳೆ ಮತ್ತು ಬೈಂದೂರು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷರಾಗಿದ್ದ ದೀಪಕ್‌ ಕುಮಾರ್‌ ಶೆಟ್ಟಿ ಅವರ ನಡುವೆ ಮಾತಿನ ಚಕಮಕಿ ನಡೆದಿದೆ.


ಸಂಸದ ರಾಘವೇಂದ್ರ ಅವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದ್ದ ದಿಶಾ ಸಭೆಗೆ ಹಾಜರಾಗಲು ಶಾಸಕರೊಂದಿಗೆ ಬಂದಿದ್ದರು. ಈ ವೇಳೆ ಉಪಾಹಾರ ಸೇವನೆ ಹಾಗೂ ವಿಶ್ರಾಂತಿಗಾಗಿ ಮಣಿಪಾಲದ ಹೊಟೇಲ್ ಒಂದಕ್ಕೆ ಆಗಮಿಸಿದ್ದರು. ಬೈಂದೂರಿನ ರಾಜಕೀಯ ಬೆಳವಣಿಗೆಗಳನ್ನು ಸಂಸದರ ಗಮನಕ್ಕೆ ತರುತ್ತಿದ್ದ ಸಂದರ್ಭ ದೀಪಕ್ ಕುಮಾರ್ ಶೆಟ್ಟಿ ಆಕ್ಷೇಪಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ವಾಗ್ವಾದ ನಡೆದು ಹೊಯ್ ಕೈ ಹಂತಕ್ಕೇರಿದೆ ಎಂದು ತಿಳಿದು ಬಂದಿದೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೇ ಮುಳುವಾಯ್ತಾ – ಗಡಿಪಾರು ಆದೇಶದಲ್ಲೇನಿದೆ

ಶಾಸಕ ಗಂಟಿಹೊಳೆ ಪಟ್ಟಣ ಪಂಚಾಯತ್ ಹೋರಾಟದ ಬಗ್ಗೆ ಚಕಾರ ಎತ್ತಿದ್ದರೆನ್ನಲಾಗಿದೆ. ಇದಕ್ಕೆ ದೀಪಕ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇವರಿಬ್ಬರ ಮಧ್ಯೆ ವಾಗ್ವಾದ ನಡೆದು ಹೋಯ್ ಕೈ ಹಂತಕ್ಕೆ ತಲುಪಿತ್ತೆನ್ನ ಲಾಗಿದೆ. ಕೂಡಲೇ ಸಂಸದರು ಹಾಗೂ ಶಾಸಕ ಕೊಡ್ಗಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರೆಂದು ತಿಳಿದು ಬಂದಿದೆ. ಇದೀಗ ಈ ವಿಚಾರ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದು, ಬೈಂದೂರು ಬಿಜೆಪಿಯಲ್ಲಿನ ಭಿನ್ನಮತವನ್ನು ಮತ್ತಷ್ಟು ಗಾಢಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಊಹಾಪೋಹಗಳು ಹಬ್ಬಲು ಕೂಡ ಇದು ಕಾರಣವಾಗಿದೆ.

30 ವರ್ಷದಿಂದ ನಟಿಸುತ್ತಿದ್ದರೂ ಶಾರುಖ್ ಖಾನ್ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಈಗ

ಬೈಂದೂರು ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ದೀಪಕ್‌ ಕುಮಾರ್‌ ಶೆಟ್ಟಿ ಅವರು ರೈತ ಸಂಘದ ಮೂಲಕ ಹೋರಾಟ ನಡೆಸುತ್ತಿದ್ದು ಜನರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಈ ಮೊದಲೇ ಶಾಸಕರು ಕೂಡ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಸರಕಾರಕ್ಕೆ ಪತ್ರ ಬರೆದು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆಯಾದರೂ ಇಬ್ಬರೂ ಆರಂಭದಿಂದಲೇ ಪರಸ್ಪರ ದೂರು ಹೇಳಿಕೊಂಡೇ ಬಂದಿದ್ದು, ಅದೇ ಅಸಮಾಧಾನ ಇದೀಗ ಬಹಿರಂಗಗೊಂಡಿದೆ ಎನ್ನಲಾಗಿದೆ.

Share Information