ಮಂಗಳೂರು ಫೆಬ್ರವರಿ 26: ಉದ್ಯಮಿಯೊಬ್ಬರು ತನ್ನ ಹೆಂಡತಿಯ ಸೀಮಂತ ಕಾರ್ಯಕ್ರಮಕ್ಕೆ ಕೆಜಿಎಫ್ ಸ್ಟೈಲ್ ನಲ್ಲಿ ಅಚ್ಚರಿ ಉಡುಗೊರೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಎಂಬವರ ಪತ್ನಿ ಅರ್ಪಿತಾ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಪತ್ನಿಯ ಸೀಮಂತಕ್ಕೆ ಉದ್ಯಮಿ ಪ್ರಕಾಶ್ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಪತ್ನಿಗೆ ಸರ್ಪ್ರೈಸ್ ನೀಡಿದ್ದಾರೆ. ಸೀಮಂತದ ಶಾಸ್ತ್ರಗಳು ನಡೆದ ಬಳಿಕ ಆಗಸದಲ್ಲಿ ದಿಢೀರ್ ಹೆಲಿಕಾಪ್ಟರ್ ಕಾಣಿಸಿಕೊಂಡಿತು. ನೋಡುತ್ತಿದ್ದಂತೆಯೇ ಆ ಹೆಲಿಕಾಪ್ಟರ್ನಿಂದ ಅರ್ಪಿತಾ ಅವರ ಮೇಲೆ ಹೂಮಳೆ ಸುರಿಸಲಾಯಿತು.
‘ಅರ್ಪಿತಾ ಅವರಿಗಾಗಲೀ ಬಂಧುಗಳಿಗಾಗಲಿ ಈ ವಿಚಾರ ಮೊದಲು ಗೊತ್ತೇ ಇರಲಿಲ್ಲ. ಪತಿ ನೀಡಿದ ಅಚ್ಚರಿಯ ಉಡುಗೊರೆಯಿಂದ ಅರ್ಪಿತಾ ಮಾತ್ರವಲ್ಲ ಸಮಾರಂಭಕ್ಕೆ ಬಂದವರೂ ಸಂಭ್ರಮಪಟ್ಟರು
ಸಿನಿಮೀಯ ಶೈಲಿಯ ಈ ಅದ್ಧೂರಿ ಎಂಟ್ರಿ ಮತ್ತು ಹೂವಿನ ಮಳೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕರಾವಳಿ ಜನತೆಯನ್ನು ಬೆರಗುಗೊಳಿಸಿದೆ. ಪತಿಯ ಈ ಅಪರೂಪದ ಪ್ರೀತಿಯ ಸನ್ನೆಗೆ ಪತ್ನಿ ಅರ್ಪಿತಾ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ