Connect with us

  LATEST NEWS

  ಉದ್ಯಮಿ ಅಶೋಕ್ ರೈ 6 ವರ್ಷಗಳಿಂದ ಬಿಜೆಪಿ ಸದಸ್ಯತ್ವವನ್ನೇ ಹೊಂದಿಲ್ಲ, ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರೆ ಅದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ: ಸಾಜ ರಾಧಾಕೃಷ್ಣ

  ಪುತ್ತೂರು, ಜನವರಿ 19: ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಸೇರ್ಪಡೆಗೊಂಡಿರುವ ಉದ್ಯಮಿ ಅಶೋಕ್ ರೈ ಕಳೆದ ಆರು ವರ್ಷಗಳಿಂದ ಬಿಜೆಪಿ ಸದಸ್ಯತ್ವವನ್ನೇ ಹೊಂದಿಲ್ಲ. ಹೀಗಿರುವಾಗ ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರೆ ಅದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಹೇಳಿದರು.

  ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಶೋಕ್ ಕುಮಾರ್ ರೈ ಮಿಸ್ ಕಾಲ್ ಮೂಲಕ ಪಕ್ಷದ ಸದಸ್ಯತ್ವವನ್ನು ಪಡೆದಿದ್ದು,ಬಳಿಕದ ದಿನಗಳಲ್ಲಿ ಪಕ್ಷದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದ ಕಾರಣ ಅವರನ್ನು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯಲ್ಲಿ ಸದಸ್ಯರಾಗಿದ್ದರು.

  ಆದರೆ ಕಳೆದ ಆರು ವರ್ಷಗಳಿಂದ ಬಿಜೆಪಿ ಪಕ್ಷದ ಸದಸ್ಯತ್ವವನ್ನಾಗಲೀ, ಪಕ್ಷದ ಯಾವುದೇ ಸಭೆಯಲ್ಲಾಗಲಿ ಭಾಗವಹಿಸಿಲ್ಲ. ಆದರೆ ಪಕ್ಷದ ನಾಯಕರು ಬಂದ ಸಂದರ್ಭದಲ್ಲಿ ಅವರೊಂದಿಗೆ ಕಾರಿನಲ್ಲಿ ಬರುವಷ್ಟಕ್ಕೆ ಮಾತ್ರ ಅವರು ಸೀಮಿತರಾಗಿದ್ದರು. ಅಶೋಕ್ ಕುಮಾರ್ ರೈ ಕಾಂಗ್ರೆಸ್ ಪಕ್ಷಕ್ಕೆ ಸೇರಿದಲ್ಲಿ ಬಿಜೆಪಿಗೆ ಯಾವುದೇ ಹಾಮಿಯಿಲ್ಲ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಪಕ್ಷದ ಜೊತೆಗೇ ಇದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply