LATEST NEWS
ಬಸ್ ಗಳಲ್ಲಿ ಲೆಡಿಹಿಲ್ ಬದಲು ಬ್ರಹ್ಮಶ್ರೀ ನಾರಾಯಣ ಗುರು ಸ್ಟಿಕ್ಕರ್ ಬಸ್ ಮಾಲೀಕರಿಗೆ ನೋಟಿಸ್
ಮಂಗಳೂರು ಸೆಪ್ಟೆಂಬರ್ 30: ಲೆಡಿಹಿಲ್ ಸರ್ಕಲ್ ಗೆ ಹೆಸರಿನ ಬದಲು ಬಸ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಎಂದು ಬದಲಾಯಿಸಿಕೊಂಡಿದ್ದ ಬಸ್ ಗಳಿಗೆ ಆರ್ ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿ ದಂಡ ಕಟ್ಟುವಂತೆ ಬಸ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಈಗ ರಸ್ತೆ ಹಾಗೂ ಸರ್ಕಲ್ ನಾಮಕರಣ ಗಲಾಟೆ ನಡೆಯುತ್ತಿದ್ದು, ನಗರದ ಲೇಡಿಹಿಲ್ ಸರ್ಕಲ್ಗೆ ನಾರಾಯಣಗುರು ಸರ್ಕಲ್ ಹೆಸರನ್ನಿಡುವಂತೆ ಬಿರುವೆರ್ ಕುಡ್ಲಸಂಘಟನೆ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ್ಗೆ ಮನವಿ ಸಲ್ಲಿಸಿ ಆಗ್ರಹ ವ್ಯಕ್ತಪಡಿಸಿತ್ತು. ಇದಕ್ಕೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ, ಶಾಸಕ ವೇದವ್ಯಾಸ ಕಾಮತ್ ಅವರಿಗೆ ಆಗ್ರಹ ವ್ಯಕ್ತಪಡಿಸಿತ್ತು. ಈ ಮಧ್ಯೆ ನಾರಾಯಣ ಗುರು ಪರ-ವಿರೋಧ ಚರ್ಚೆ ನಡೆದಿದ್ದು, ಕೆಲವು ಬಸ್ಗಳಲ್ಲಿ ಸ್ಟಿಕ್ಕರ್ ಕೂಡ ಅಂಟಿಸಲಾಗಿತ್ತು.
ಬಸ್ಗಳಲ್ಲಿ ಸ್ಟಿಕ್ಕರ್ ಅಂಟಿಸಿರುವ ಬಗ್ಗೆ ಸಿಲ್ವಾ ಜೋಯ್ ಎಂಬವರು ಆರ್ಟಿಓ ಕಚೇರಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಆರ್ಟಿಒ ಅಧಿಕಾರಿಗಳು ಮಂಗಳವಾರ ಸಂಜೆ ಲೇಡಿಹಿಲ್ ಸಮೀಪ ತಪಾಸಣೆ ನಡೆಸಿ ದಂಡ ಕಟ್ಟುವಂತೆ ಬಸ್ ಮಾಲೀಕರಿಗೆ ನೋಟಿಸು ನೀಡಿದ್ದಾರೆ. ಬಸ್ ಮಾಲೀಕರಿಗೆ ನೋಟಿಸು ನೀಡಿದ ಕ್ರಮವನ್ನು ಬಿರುವೆರ್ ಕುಡ್ಲಸಂಘಟನೆಗಳು ಆಕ್ಷೇಪಿಸಿ ಲೇಡಿಹಿಲ್ ಸಮೀಪ ಪ್ರತಿಭಟನೆ ನಡೆಸಿತು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಮೊಬೈಲ್ ಮೂಲಕ ಅಧಿಕಾರಿಗಳ ಜತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.
Facebook Comments
You may like
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
ವಿದ್ಯಾರ್ಥಿನಿಯರ ಮೈಮುಟ್ಟಿ ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಬಿತ್ತು ಧರ್ಮದೇಟು..!!
You must be logged in to post a comment Login